ಇಸ್ಕಾನ್ ಹಸುಗಳನ್ನು ಕಟುಕರಿಗೆ ಮಾರುತ್ತದೆ ಎಂಬ ವಿವಾದಾತ್ಮಕ ಹೇಳಿಕೆಗಾಗಿ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರಿಗೆ ಇಸ್ಕಾನ್ ₹ 100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದೆ.
ಇನ್ನು ಕುರಿತು ಮಾತನಾಡಿರುವ ಇಸ್ಕಾನ್ ಉಪಾಧ್ಯಕ್ಷ ರಾಧರಮಣ್ ದಾಸ್, ಮೇನಕಾ ಗಾಂಧಿಯವರ ಕಾಮೆಂಟ್ ದುರದೃಷ್ಟಕರ ಮತ್ತು ಪ್ರಪಂಚದಾದ್ಯಂತದ ಇಸ್ಕಾನ್ ಭಕ್ತರ ಭಾವನೆಗಳಿಗೆ ನೋವುಂಟು ಮಾಡಿದೆ. ಮಾಜಿ ಸಚಿವರಾಗಿದ್ದ ಮೇನಕಾ ಅವರು ಇಸ್ಕಾನ್ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಸುಳ್ಳು ಹೇಳುವುದು ಹೇಗೆ? ಅವರು ಅನಂತಪುರದ ಗೋ ಶಾಲೆಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಅಲ್ಲಿಗೆ ಮನೇಕಾ ಗಾಂಧಿ ಭೇಟಿ ನೀಡಿದ್ದು ಅಲ್ಲಿನ ಜನರಿಗೆ ನೆನಪಿಲ್ಲ. ಮನೆಯಲ್ಲಿ ಕುಳಿತು ಅವರು ಈ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.