ಮೆಟ್ರೋ ಸಿಬ್ಬಂದಿ ವರ್ತನೆ ಖಂಡಿಸಿ ಮರವೇ ಪ್ರತಿಭಟನೆ

Advertisement


ಶ್ರೀರಂಗಪಟ್ಟಣ: ಬೆಂಗಳೂರು ಮೆಟ್ರೋ ರೈಲಿನಲ್ಲಿ ರೈತನ ಸಂಚಾರವನ್ನು ನಿರಾಕರಿಸಿದ ಸಿಬ್ಬಂಧಿಗಳ ವಿರುದ್ದ ಮಂಡ್ಯ ರಕ್ಷಣಾ ವೇಧಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಎದುರು ಮ.ರ.ವೇ ಸಂಸ್ಥಾಪಕ‌ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು, ಅನ್ನದಾತನ ಮೆಟ್ರೋ ಸಂಚಾರವನ್ನು‌ ತಡೆದು ಅವಮಾನಿಸಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಬಂಧಪಟ್ಟವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕರ್ನಾಟಕದವರನ್ನೇ ಇಲ್ಲಿನ ಸಿಬ್ಬಂಧಿಗಳನ್ನಾಗಿ ನೇಮಿಸಿಕೊಂಡು, ಅನ್ಯ ಭಾಷಿಗರನ್ನು ನೇಮಿಸಿಕೊಳ್ಳಬಾರದು ಎಂದು ಆಗ್ರಹಿಸಿದರು. ಇದು ಹೀಗೆ ಮುಂದುವರೆದರೆ ಸಂಘಟನೆ ವತಿಯಿಂದ ಜನ- ಜಾನುವಾರುಗಳೊಂದಿಗೆ ಮೆಟ್ರೋಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿ ತಹಸೀಲ್ದಾರ್ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.