ಮುಸ್ಲಿಂ ಯುವಕನಿಗೆ ದೈವಾವೇಷ

Advertisement

ಮಂಗಳೂರು: ಒರಿಸ್ಸಾ ಮೂಲದ ಮುಸ್ಲಿಂ ಯುವಕ ದೈವಸ್ಥಾನದ ಕೆಲಸ ನಿರ್ವಹಿಸಿವ ಸಂದರ್ಭ ಏಕಾಏಕಿ ಈತನಿಗೆ ದೈವ ಅವೇಷವಾದ ಘಟನೆ ಬೆಳಕಿಗೆ ಬಂದಿದೆ.
ಮಂಗಳೂರಿಗೆ ಹೊರವಲಯದ ಪೆರ್ಮುದೆಯಲ್ಲಿನ ಪಿಲಿ ಚಾಮುಂಡಿ ದೇವಸ್ಥಾನದಲ್ಲಿ ಕಳೆದ ಎರಡು ತಿಂಗಳ ಹಿಂದೆ ದೈವಸ್ಥಾನಕ್ಕೆ ಸಂಬಂಧಪಟ್ಟ ತಡೆಗೋಡೆ ನಿರ್ಮಿಸುವ ಸಂದರ್ಭ ಒರಿಸ್ಸಾ ಮೂಲದ ಯುವಕನ ಮೈಯಲ್ಲಿ ದೈವ ಅವೇಷ ಬಂದಿದ್ದು, ಪ್ರಶ್ನಾ ಚಿಂತನೆಯಲ್ಲಿ ಕಂಡುಕೊಂಡಾಗ ಇದು ಜಿಲ್ಲೆಯ ಪ್ರತಿಷ್ಟಿತ ಕಂಪನಿಯಾದ ಎಂ.ಆರ್.ಪಿ.ಎಲ್ ನಿಂದ ಬಂದ ಸಮಸ್ಯೆ ಎಂದು ಕಂಡು ಬಂದಿದೆ.
ಕಳೆದ ಮೂರು ದಶಕಗಳ ಹಿಂದೆ, ಪ್ರತಿಷ್ಠಿತ ಎಂ.ಆರ್,ಪಿ,ಎಲ್ ಕಂಪನಿಗಾಗಿ ಜಮೀನು ಭೂಸ್ವಾಧೀನಗೊಂಡಿದ್ದು ಆ ಸಂದರ್ಭ ಅಲ್ಲಿದ್ದ ಪಿಲಿಚಾಮುಂಡಿ ದೈವಸ್ಥಾನ ಹಾಗೂ ಕೊಡಮಣಿತ್ತಾಯ ದೈವಸ್ಥಾನ ಪುನರ್ವಸತಿ ಪ್ರದೇಶದಲ್ಲಿನ ಅಂದರೆ ಪೆರ್ಮುದೆ ಸೋಮನಾಥ ಧಾಮಕ್ಕೆ ಸ್ಥಳಾಂತರಗೊಂಡು ಕಾಲ ಕಾಲಕ್ಕೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿತ್ತು, ಪೆರ್ಮುದೆ ಗ್ರಾಮಕ್ಕೆ ಸಂಬಂಧಿಸಿ ದೈವಗಳ ನಾಲ್ಕು ಗಡು ಇದ್ದು, ಪ್ರಸುತ್ತ ಕಾಯರ್ ಕಟ್ಟೆ ಎಂಬುದು ಕುತ್ತೆತ್ತೂರು ಗ್ರಾಮದ ಪೆರ್ಮುದೆ ಗಡುವಾಗಿದೆ.
ಈ ಗಡು ಸ್ಥಳದಲ್ಲಿ ನಡೆಯುತ್ತಿದ್ದ ದೈವಾರಾಧನೆ ಪ್ರಕ್ರಿಯೆಗಳು ಕಳೆದ ೧೮ ವರ್ಷಗಳಿಂದ ಸ್ಥಗಿತಗೊಂಡಿದೆ. ಭೂಸ್ವಾಧೀನಗೊಂಡ ಮತ್ತು ಎಂಆರ್‌ಪಿಎಲ್‌ಗೆ ಹತ್ತಿರವಾದ ಕಾರಣ ಇಲ್ಲಿ ನೇಮ ನಡೆಸಲು ಅಸಾಧ್ಯವಾಗಿತ್ತು. ಇಲ್ಲಿನ ಬೌಗೋಳಿಕ ಸ್ಥಿತಿಗತಿಗಳೂ ಇದಕ್ಕೆ ಪ್ರಮುಖ ಕಾರಣವಾಗಿತ್ತು. ನೇಮ ಸ್ಥಗಿತಗೊಂಡ ನಂತರದ ಕಾಲದಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಮತ್ತು ಕಂಪನಿ ವ್ಯಾಪ್ತಿಯಲ್ಲಿ ದೋಷ ದೃಷ್ಟಾಂತ ಕಂಡು ಬರಲು ಪ್ರಾರಂಭವಾಯಿತು.
ಪಿಲಿಚಂಡಿ ದೈವಸ್ಥಾನದ ವಾರ್ಷಿಕ ನೇಮೋತ್ಸವ ಸಂದರ್ಭ ಕಾಯರ್ ಕಟ್ಟೆ ಗಡು ಸ್ಥಳದಲ್ಲಿ ನಡೆಯುತ್ತಿದ್ದ ಯಥಾ ಪ್ರಕಾರ ಮುಂದುವರಿದರೆ ಮಾತ್ರ ದೋಷಗಳಿಗೆ ಪರಿಹಾರ ಎಂಬ ದೈವದ ನುಡಿಯಾಯಿತ್ತು, ಈ ನಡುವೆ ಕಳೆದ ಎರಡು ತಿಂಗಳ ಹಿಂದೆ ಪಿಲಿಚಾಮುಂಡಿ ದೈವಸ್ಥಾನಕ್ಕೆ ಸಂಬಂಧಪಟ್ಟ ತಡೆಗೋಡೆ ನಿರ್ಮಾಣ ಮಾಡುತ್ತಿದ್ದ ಸಂದರ್ಭ ಒರಿಸ್ಸಾ ಮೂಲದ ಮುಸ್ಲಿಂ ಯುವಕನಿಗೆ ದೈವ ಅವೇಷ ಬಂತು ಈ ಬಗ್ಗೆ ಪೆರ್ಮುದೆ ಸೋಮನಾಥೇಶ್ವರ ದೇಗುಲದಲ್ಲಿ ಪ್ರಶ್ನಾಚಿಂತನೆ ಇರಿಸಿದಾಗಲೂ ಎಂಆರ್‌ಪಿಎಲ್ ಸಮೀಪದ ಗಡುಪಾಡಿನಲ್ಲಿ ನೇಮೋತ್ಸವ ನಿಂತ ಹೋದ ಕಾರಣ ಇಂತಹ ಪ್ರಕರಣಗಳು ನಡೆಯುತ್ತಿದೆ ಎಂಬುದು ಕಂಡು ಬಂತು ಎನ್ನಲಾಗಿದೆ.