ಮುರುಘಾ ಶರಣರ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ, ಸೂಕ್ತ ಕಾನೂನು ಕ್ರಮ : ಅಲೋಕಕುಮಾರ

Advertisement

ಬೆಳಗಾವಿ: ಮುರುಘಾ ಶರಣರ ಲೈಗಿಂಕ ದೌರ್ಜನ್ಯ ಆರೋಪ ಪ್ರಕರಣ
ಸಂಬಂಧಿಸಿದಂತೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು
ಎಂದು ಕಾನೂನು ಸುವ್ಯವಸ್ಥೆಯ ಎಡಿಜಿಪಿ ಅಲೋಕಕುಮಾರ
ತಿಳಿಸಿದರು.
ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಈ ವರ್ಷ ವಿಶೇಷವಾಗಿ ಬಹಳಷ್ಟು ವಿದ್ಯಮಾನಗಳು ಆಗುತ್ತಿವೆ. ಕಳೆದ
ಎರಡೂ ವರ್ಷದಿಂದ ಗಣೇಶೋತ್ಸವ ಆಗಿರಲಿಲ್ಲ. ಈ ವರ್ಷ
ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ.
ಬೆಳಗಾವಿಯಲ್ಲಿ ರ್ಯಾಪಿಡ್ ಪೋರ್ಸ್ ಸೇರಿದಂತೆ ಹೆಚ್ಚಿನ ಸಿಬ್ಬಂದಿ
ನಿಯೋಜನೆ ಮಾಡಲಾಗುವುದು. ಸಾರ್ವಜನಿಕ ಗಣೇಶ ಮಂಡಳಗಳ
ಸಲುವಾಗಿ ವಾಟ್ಸಪ್ ಮೂಲಕ ಸಲಹೆ ಸೂಚನೆ ನೀಡಲು ಅನಕೂಲ
ಮಾಡಿಕೊಡಲಾಗುವುದು. ಸತತವಾಗಿ ಪೊಲೀಸ್ ಸಿಬ್ಬಂದಿಗಳು
ಗಣೇಶ ಮಂಡಳ ಮುಖಂಡರ ಜೊತೆಗೆ ಸಂಪರ್ಕದಲ್ಲಿರುವಂತೆ
ಸೂಚನೆ ನೀಡಲಾಗಿದೆ ಎಂದರು.
ಖಾಸಗಿ ಜಾಗೆಯಲ್ಲಿ ವೀರ ಸಾವರ್ಕರ್, ಬಾಲಗಂಗಾಧರ ತಿಲಕ್
ಸೇರಿದಂತೆ ಗಣ್ಯರ ಭಾವ ಚಿತ್ರ ಹಾಕುವಲ್ಲಿ ಅಭ್ಯಂತರ ಇಲ್ಲ. ಆದರೆ
ಸಾರ್ವಜನಿಕ ಗಣೇಶ ಮಂಡಳಗಳಲ್ಲಿ ಭಾವ ಚಿತ್ರ ಅಳವಡಿಸುವಾಗ
ಸಂಬಂಧಿಸಿದ ಪಾಲಿಕೆಯ ಅನುಮತಿ ಕಡ್ಡಾಯವಾಗಿದೆ ಎಂದರು.
ಡಿಜೆ, ಮ್ಯೂಸಿಕ್ ಕುರಿತು ನ್ಯಾಯಾಲಯ ಆದೇಶ ನೀಡಿದೆ. ಆ ಸೂಚನೆ
ಮೆರೆಗೆ ಆಗಬೇಕು. ಸುಮ್ಮನೆ ಉಲ್ಲಂಘನೆ ಮಾಡಿದರೆ ಕಾನೂನು
ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಎಸ್ಪಿ ಡಾ. ಸಂಜೀವ ಪಾಟೀಲ, ನಗರ ಪೊಲೀಸ್ ಆಯುಕ್ತ ಡಾ.
ಬೋರಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.