ಮುರುಘಾ ಶರಣರ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ

ಮುರುಘಾ ಶರಣ
Advertisement

ಚಿತ್ರದುರ್ಗ: ಶಿವಮೂರ್ತಿ ಮುರುಘಾ ಶರಣರ ನ್ಯಾಯಾಂಗ ಬಂಧನವನ್ನು ಮತ್ತೆ 14 ದಿನಗಳ ಅವಧಿಗೆ ವಿಸ್ತರಿಸಿ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್​ ಕೋರ್ಟ್​ ಆದೇಶ ಮಾಡಿದೆ.
ಫೋಕ್ಸೋ ಪ್ರಕರಣದಲ್ಲಿ ಬಂಧನದಲ್ಲಿರುವ ಮುರುಘಾ ಶರಣರ ಜೊತೆ ಮತ್ತೋರ್ವ ಆರೋಪಿ(ಎ2) ವಾರ್ಡನ್​ಗೂ ನ್ಯಾಯಾಂಗ ಬಂಧನವನ್ನೂ ನವೆಂಬರ್ 3ರವರೆಗೆ ಕೋರ್ಟ್​ ವಿಸ್ತರಿಸಿದೆ. ಮುರುಘಾ ಶರಣರ ವಿರುದ್ಧದ ಎರಡನೇ ಎಫ್​ಐಆರ್ ಪ್ರಕರಣ ಸಂಬಂಧ 2-3 ದಿನಗಳಲ್ಲಿ ಬಾಲಕಿಯರ ವೈದ್ಯಕೀಯ ಪರೀಕ್ಷೆ ನಡೆಸುವ ಸಾಧ್ಯತೆಯಿದೆ ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್​ಲಿ ಹೇಳಿದ್ದಾರೆ.