ಕೊಪ್ಪಳ: ಮುನಿಸಿಕೊಂಡಿದ್ದ ಸಂಸದ ಸಂಗಣ್ಣ ಕರಡಿ ಸಂಧಾನ ಸಭೆಗಳ ಬಳಿಕ ಬಂಡಾಯ ಕೈಬಿಟ್ಟಿದ್ದಾರೆ.
ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ ಪರ ಪ್ರಚಾರ ಮಾಡಲು ಒಪ್ಪಿಕೊಂಡಿದ್ದು ಭಿನ್ನಮತ ಶಮನಗೊಂಡಿದೆ. ರಾಜ್ಯ ನಾಯಕರ ವಿರುದ್ಧ ಹರಿಹಾಯ್ದಿದ್ದ ಸಂಗಣ್ಣನವರ ನಿವಾಸಕ್ಕೆ ಬಂದು ಮುಖ್ಯ ಸಚೇತಕ ರವಿಕುಮಾರ್, ಶಾಸಕ ಅರವಿಂದ್ ಬೆಲ್ಲದ ಮನವೊಲಿಸಲು ಪ್ರಯತ್ನಿಸಿದರು. ಬೆಂಗಳೂರಿನಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಆರ್.ಅಶೋಕ, ಪ್ರಹ್ಲಾದ್ ಜೋಶಿ, ಬಿ.ವೈ.ವಿಜಯೇಂದ್ರ ಮತ್ತಿತರರು ಮನವೊಲಿಸಿದರು. ಆದರೂ ಮುನಿಸು ಹಾಗೇ ಇತ್ತು. ಸದ್ಯ ಎಲ್ಲದಕ್ಕೂ ತೆರೆ ಎಳೆದ ಸಂಗಣ್ಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವುದಿಲ್ಲ, ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ. ಮೋದಿ ಅವರ ಕೈ ಬಲಪಡಿಸಲು ನಾವೆಲ್ಲಾ ಶ್ರಮಿಸಬೇಕಿದೆ. ನಾಯಕರ ಹೇಳಿಕೆ ಮೇಲೆ ವಿಶ್ವಾಸ ಇಡಬೇಕಿದೆ ಎಂದರು.