ಮುಧೋಳಕ್ಕೆ ರಶಿಯಾದ DJ ಕ್ರಿಸ್ಪಿ

Advertisement

ಬಾಗಲಕೋಟೆ: ಮುಧೋಳ ನಗರದ ಪ್ರತಿಷ್ಠಿತ ವೀರಸಾವರಕರ ಗಜಾನನ ಮಂಡಳಿಯ ೧೧ನೇ ದಿನದ ಗಣೇಶ ವಿಸರ್ಜನೆ ಕಾಯಕ್ರಮವು ದಿ. ೨೯ರಂದು ತಡರಾತ್ರಿ ನಡೆಯಲಿದ್ದು, ರಶಿಯಾ ದೇಶದ ಅಂತರಾಷ್ಟ್ರೀಯ ಡಿ.ಜೆ. ಆಪರೇಟರ್, ಕ್ರಿಸ್ಪಿ ಡಿಜೆ ಆಗಮಿಸಿ ಗಮನ ಸೆಳೆಯಲಿದ್ದಾರೆ.
ವಿಸರ್ಜನಾ ಮೆರವಣಿಗೆಗೆ ವ್ಯಾಪಕ ಸಿದ್ಧತೆಗಳು ನಡೆದಿವೆ. ಅಂತರಾಷ್ಟ್ರೀಯ ಡಿಜೆ ಆಪರೇಟರ್ ಕ್ರಿಸ್ಪಿ ಡಿಜೆ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸಲಿದ್ದು, ದಕ್ಷಿಣ ಭಾರತಕ್ಕೆ ಮೊದಲ ಭೇಟಿ ಇದಾಗಲಿದೆ. ಇವರ ಡಿಜೆ ಸದ್ದಿಗೆ ಹೆಜ್ಜೆ ಹಾಕಲು ಅಂದಾಜು ೨೦ ಸಾವಿರಕ್ಕೂ ಹೆಚ್ಚು ಯವಕರು ಸೇರುವ ನಿರೀಕ್ಷೆ ಇದೆ.
ಜೈ ಭಾರತ ಸರ್ಕಲ್‌ನಲ್ಲಿ ರಾತ್ರಿ ೮.೩೦ಕ್ಕೆ ಈ ವಿಶ್ವ ವಿಖ್ಯಾತ ಕಾಯಕ್ರಮ ಪ್ರಾರಂಭವಾಗಲಿದ್ದು ದೇಶದ ಮುಂಚೋಣಿ ಡಿ.ಜೆ. ಆಪರೇಟರಗಳಾದ ಮುಂಬಯಿನ ಓಂಕಾರ +೭೨, ಪುಣೆಯ ಎಂ.ಆರ್. ಪುಣೇಕರ ಹಾಗೂ ಸಾಂಗಲಿಯ ಮೀರಜಕರ ಡಾಲ್ಪಿ ತಂಡದವರು ಇದರಲ್ಲಿ ಪಾಲ್ಗೊಳಲಿದ್ದಾರೆ ಎಂದು ಸಾವರಕರ ಪ್ರತಿಷ್ಠಾನದ ಅಧ್ಯಕ್ಷ ಸದಾ ಜಾಧವ ಹಾಗೂ ಸಂಘಟಕರಾದ ಪ್ರದೀಪ ನಿಂಬಾಳ್ಕರ, ಆನಂದ ಗಣಾಚಾರಿ, ಕಿರಣ ಪಾಲೋಜಿ, ಹಾಗೂ ರವಿ ಮುಧೋಳ ತಿಳಿಸಿದ್ದಾರೆ.‌ ಇದಕ್ಕಾಗಿ ವ್ಯಾಪಕ ಪೊಲೀಸ್‌ ಬಂದೋಬಸ್ತ್ ಏರ್ಪಡಿಲಾಗಿದೆಂದು ಸಿಪಿಐ. ಮಹಾದೇವ ಶಿರಹಟ್ಟಿ ತಿಳಿಸಿದ್ದಾರೆ.