ಆದಿಪುರಾಣ ಒಂದಿಲ್ಲೊಂದು ಕಾರಣಕ್ಕೆ ಮತ್ತೆಮತ್ತೆ ಓದಲು ಬಯಸುವ ಪಂಪನ ಕಾವ್ಯವಾಗಿದೆ. ಮುಕ್ತಿಯೇ ಧರ್ಮಪ್ರಧಾನವಾದ ಕಾವ್ಯದ ಅಂತಿಮ ಗುರಿ ಎನ್ನುವುದು ನಿಜ. ಮೋಕ್ಷಗಾಮಿಯಾದ ಜೀವ ವೊಂದು ಹಂತ, ಹಂತವಾಗಿ ಮಾಗುತ್ತಾ ಜನ್ಮಾಂತರಗಳ ಪೊರೆ ಕಳಚುತ್ತಾ ಸಾಗುವುದೇ ಇಲ್ಲಿನ ಮುಖ್ಯವಾದ ಅಂಶ. ಎಷ್ಟೊಂದು ಭವಾವಳಿಗಳು, ಎಷ್ಟೊಂದು ಸುಖೋಪಭೋಗಗಳು. ವೈರಾಗ್ಯದ ಬೆನ್ನಬದಿಯಲ್ಲೇ ಅಂಟಿಕೊಂಡಿರುವ ಪ್ರೇಮಕ್ಕಿಂತ ಮಿಗಿಲಾದ ಭೋಗಜೀವನಕ್ರಮ ಪ್ರತಿಯೊಂದು ಜೀವವೂ ಸಾಗಿ ಹೊರಬರಲೇಬೇಕಾದ ಪಥವಾಗಿದೆ. ಕಿಕ್ಕಿರಿದ ಕಾಮನೆ ಗಳು, ಹೆಣ್ಣದೇಹದ ವರ್ಣನೆಗಳು, ಸಡಗರದಿಂದ ವರ್ಣಿಸಲ್ಪಡುವ ಸುರತಕ್ರಿಯೆಗಳು ಎಲ್ಲ ಸಾಗುವುದು ಮೋಕ್ಷವೆಂಬ ಅಂತಿಮ ನಿಲುಗಡೆಯ ಕಡೆಗೆ.
ಪಂಪ ಭೋಗಜೀವಕ್ಕೆ ನಿಲುಗಡೆಯನ್ನು ಕೊಡಲೆಂಬಂತೆ ಒದಗಿ ಬರುವ ಸಾವನ್ನು ತಂತ್ರ ವೆನ್ನುವಂತೆ ಬಳಸಿಕೊಳ್ಳುತ್ತಾನೆ. ಮೋಕ್ಷದ ಕಡೆಗೆ ಚಲಿಸಬೇಕಾದ ಜೀವಗಳು ಭೋಗದಲ್ಲೇ ಮೈಮರೆತು ನಿಂತರೆ ಎಚ್ಚರಿಸುವಂತೆ ಸಾವು ಅವರನ್ನು ಹುಡುಕಿ ಬರುತ್ತದೆ. ಆದಿಪುರಾಣದಲ್ಲಿ ಭೋಗದ ಬೆನ್ನ ಬದಿಯಲ್ಲಿ ಬರುವ ಸಾವು ಬೆಳಕು ನೆರಳಿನಾಟವೆಂಬತೆ ಬಿಡದೆ ಹಿಂಬಾಲಿಸುತ್ತದೆ.
ರಕ್ತದ ಸರೋವರದಲ್ಲಿ ತನ್ನ ಬೇಗೆಯನ್ನು ತಣಿಸಲೆತ್ನಿಸಿ ಸಾವನ್ನಪ್ಪುವ ಅರವಿಂದ, ರಾಜ್ಯಲಕ್ಷ್ಮಿ ಸಿಗಲಿಲ್ಲವೆಂದು ಹುತ್ತದಲ್ಲಿ ಕೈಯನ್ನಿಡುವ ಜಯವರ್ಮ, ಶಯ್ಯಾಗೃಹದಲ್ಲಿ ಆವರಿಸಿದ ಧೂಪದಲ್ಲಿ ಪರಸ್ಪರ ತೆಕ್ಕೆಯಲ್ಲಿದ್ದೇ ಸಾವನ್ನಪ್ಪುವ ಶ್ರೀಮತಿ – ವಜ್ರಜಂಘ, ನರ್ತಿಸುವಾಗಲೇ ಸಾವನ್ನಪ್ಪುವ ನಿಲಾಂಜನೆ ಇಂತಹ ಹಲವಾರು ನಾಟಕೀಯ ಪ್ರಸಂಗಗಳನ್ನು ಪಂಪ ಸೃಷ್ಟಿಸುತ್ತಾನೆ. ಪುರುಷನಿಗೆ ಮಾತ್ರವೇ ಇಹದಿಂದ ಬಿಡುಗಡೆ ಸಾಧ್ಯ. ಅವನ ಈ ಬಿಡುಗಡೆಯ ದಾರಿಯಲ್ಲಿ ಬಿಡಿಸಿಕೊಳ್ಳಲೇಬೇಕಾದ ಬಂಧನವಾಗಿ ಹೆಣ್ಣು ತೋರುತ್ತಾಳೆ. ಬೌ, ಜೈನ, ವೈದಿಕ ಧರ್ಮಗಳಲ್ಲಿ ಗಂಡಿನ ಸಾಧನೆಯ ದಾರಿಯಲ್ಲಿನ ಮೋಹಪಾಶವೆಂಬಂತೆ ಹೆಣ್ಣು ಬಳಸಲ್ಪಟ್ಟಿದ್ದಾಳೆ. ಅವಳಿಗೂ ಸಹ ಇಂತಹ ಬಂಧನ ಗಳಿಂದ ಬಿಡುಗಡೆಯ ಸಾಧ್ಯತೆಗಳನ್ನು ಕುರಿತು ನಮ್ಮ ಸಾಹಿತ್ಯ ಚಿಂತಿಸಲೂ ಇಲ್ಲ, ಚರ್ಚಿಸಲೂ ಇಲ್ಲ. ಪಾರಮಾರ್ಥಿಕ ಲೋಕವನ್ನು ಪಡೆಯಲು ಅವಳು ಅನರ್ಹಳು ಎಂಬ ಪುರುಷ ಚಿಂತನೆ ಇಲ್ಲಿ ಕೆಲಸ ಮಾಡಿದಂತೆ ತೋರುತ್ತದೆ.
ಪಂಪನ ಕಾವ್ಯದಲ್ಲಿನ ಸಾವುಗಳನ್ನು ಕುರಿತು ಯೋಚಿಸುವ ಸಂದರ್ಭದಲ್ಲಿಯೇ ಸಾವಿನ ಸುದ್ದಿಗಳು ಕಿವಿಯ ಮೇಲೆ ಬೀಳುತ್ತಲೇ ಇವೆ. ಇತ್ತೀಚೆಗೆ ಸಾವಿನ ಸುದ್ದಿಗಳೂ ಸಹ ಬದುಕಿನ ಅನಿವಾರ್ಯ ಅಂಗಗಳಾಗಿವೆ. ನಮ್ಮ ನಡುವಿನ ಹಿರಿಯ ಜೀವಿಗಳು ಒಂದಿಲ್ಲೊಂದು ಕಾರಣದಿಂದಾಗಿ ನಮ್ಮನ್ನು ಬಿಟ್ಟು ನಿರ್ಗಮಿಸುತ್ತಿದ್ದರೆ. ಸಾವು ಬದುಕಿನ ಚಕ್ರದಲ್ಲಿನ ಒಂದು ಹಂತವೆಂಬುದು ನಿಜ. ಆದರೆ ತುಂಬಾ ಹತ್ತಿರದವರ ಸಾವನ್ನು ಸಹಜವಾಗಿ ಒಪ್ಪಿಕೊಳ್ಳಲು ಅವರೊಂದಿಗಿನ ಸಂಬಂಧಗಳು ಅಡ್ಡಿಪಡಿಸುತ್ತವೆ. ಹಿರಿಯ ಗಾಯಕರಾದ ಶಿವಮೊಗ್ಗ ಸುಬ್ಬಣ್ಣ, ನಾಟಕಕಾರರಾದ ನಿಸರ್ಗಪ್ರಿಯ( ಸಿದ್ಧಗಂಗಯ್ಯ ಕಂಬಾಳು) ಸಾಹಿತ್ಯ ಮತ್ತು ಕಲಾಪ್ರಕಾರದ ವಿಮರ್ಶಕರಾದ ಎಂ.ಎಚ್. ಕೃಷ್ಣಯ್ಯನವರ ಸಾವು ವಿಶಾಲವಾಗಿ ಬೆಳೆದು ನಿಂತ ಮರಗಳು ನೆಲಕ್ಕೆ ಕುಸಿದು ಬಿ ಶೂನ್ಯತೆಯನ್ನು ಉಂಟುಮಾಡಿವೆ.
ಶಿವಮೊಗ್ಗ ಸುಬ್ಬಣ್ಣ ಕುವೆಂಪು ಅವರ ಕವಿತೆಗಳನ್ನು, ಶಿಶುನಾಳ ಶರೀಫರ ಗೀತೆಗಳನ್ನು ತಮ್ಮದೇ ರಚನೆಗಳೆಂಬ ಮಮಕಾರದಲ್ಲಿ ಹಾಡುತ್ತಾ ಬಂದವರು. ನಾವು ಆ ಹಾಡುಗಳನ್ನು ತುಂಬು ಪ್ರೀತಿಯಿಂದ ಕೇಳುತ್ತಾ ಆವಾಹಿಸಿಕೊಂಡೆ ಬಂದೆವು. ಸರಳ ಹಾಗೂ ನಿಗರ್ವಿಯಾಗಿ ಸುಬ್ಬಣ್ಣ ಎಲ್ಲರಿಗೂ ಹತ್ತಿರವಾದ ವರು. ಕುವೆಂಪು, ಬಸವಣ್ಣ, ಅಂಬೇಡ್ಕರ್ ಅವರನ್ನು ಒಂದು ನಿರ್ದಿಷ್ಟ ವರ್ಗಕ್ಕೆ ಸೇರಿದವರೆಂದು ಗುರುತಿಸುವ, ಅವರ ಹಿರಿದಾದ ವ್ಯಕ್ತಿತ್ವಗಳನ್ನು ಕುಗ್ಗಿಸುವ ಈಚೆಗಿನ ಕ್ರಮವೇ ಅವಮಾನಕಾರಿಯಾದುದು. ಈ ಮಹಾತ್ಮರು ಇಡೀ ಮನುಕುಲಕ್ಕೆ ಸೇರಿದವರು ಎಂಬುದನ್ನು ಮತ್ತೆಮತ್ತೆ ನೆನಪಿಸಿ ಕೊಳ್ಳಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಹೀಗೆ ಗುರ್ತಿಸುವುದರ ಮೂಲಕ ನಮಗೆ ನಾವೇ ಅವಮಾನ ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ಸಹ ನೆನಪಿಟ್ಟು ಕೊಳ್ಳಬೇಕು. ಸುಬ್ಬಣ್ಣ ಈ ಯಾವ ಆಗುಹೋಗುಗಳನ್ನು ಗಮನಿಸದೆ ಕುವೆಂಪು ಹಾಗೂ ಶರೀಫರ ರಚನೆಗಳನ್ನು ಮನದುಂಬಿ ಹಾಡಿದರು. ಕಳಂಕವಿಲ್ಲದ ಹಿರಿಯ ಚೇತನವಾಗಿ ಬದುಕಿದರು. ಕಾಡು ಕುದುರೆ ಚಲನಚಿತ್ರದಲ್ಲಿನ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದು ಕೊನೆಯವರೆಗೂ ಜಾತ್ಯಾತೀತ ರಾಗಿ ಬದುಕಿದರು.
ನಿಸರ್ಗಪ್ರಿಯ ಜಾನಪದ ಸತ್ವಗಳ, ಪೌರಾಣಿಕ ಕಥೆಗಳ ಬೆನ್ನುಹತ್ತಿ ಕವಿತೆ ಮತ್ತು ನಾಟಕಗಳನ್ನು ಬರೆದರು. ನಾಟಕ ಪ್ರಕಾರ ಅವರಿಗೆ ಸಹಜವಾಗಿ ಒಲಿದು ಬಂದಿತ್ತು. ಬೆನಕನ ಕೆರೆ, ಶ್ಯುನಶ್ಯೇಪ, ತಿರುಕರಾಜ, ಚೋರಪು ರಾಣಗಳೆಂಬ ಮುಂತಾದ ನಾಟಕಗಳನ್ನು ಅವರು ರಚಿಸಿರು ಹಾಗೂ ಅವು ಪ್ರದರ್ಶನಗೊಂಡಿವು. ಹಿರಿಯರಾದ ಎಂ.ಎಚ್. ಕೃಷ್ಣಯ್ಯ ಅಧ್ಯಾಪನ ಕ್ಷೇತ್ರಕ್ಕೆ ಸೇರಿದವರಾಗಿದ್ದು ಸಾಹಿತ್ಯ, ರಂಗಭೂಮಿ, ಚಿತ್ರಕಲೆ ಮತ್ತು ಸಂಗೀತ ಪ್ರಕಾರವನ್ನು ಬಲ್ಲ ವಿದ್ವಾಂಸರಾಗಿರು. ಒಬ್ಬ ವ್ಯಕ್ತಿ ಹಲವು ಜ್ಞಾನ ಕ್ಷೇತ್ರಗಳನ್ನು ಏಕಕಾಲಕ್ಕೆ ಒಳಗೊಳ್ಳುವ ಬಗೆ ವಿಸ್ಮಯ ಕಾರಿಯಾದದ್ದು. ಇವೆಲ್ಲವೂ ಸಾಧ್ಯ ವೆನ್ನುವಂತೆ ಎಂ.ಎಚ್.ಕೆ ಬದುಕಿದವರು. ಶಿಷ್ಯ ಪ್ರೇಮಕ್ಕೆ ಹೆಸರಾಗಿ ಅವರು ಶಿಷ್ಯರಲ್ಲದ ಪ್ರತಿಭಾವಂತರನ್ನು ಪ್ರೀತಿಸುವ, ಪ್ರೋತ್ಸಾಹಿಸುವ ಹೃದಯ ವೈಶಾಲ್ಯ ಉಳ್ಳವರಾಗಿರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷöರಾಗಿ ಸಂದರ್ಭದಲ್ಲಿ ಹೊಸ ತಂತ್ರಜ್ಞಾನವನ್ನು, ಆಧುನಿಕ ಮಾಹಿತಿ ಕ್ಷೇತ್ರವನ್ನು ಅವರು ಬಳಸಿಕೊಂಡ ಕ್ರಮ ಅನನ್ಯವಾದದ್ದು. ಸ್ವಂತ ಕವಿತೆಯ ಓದು ಕಾರ್ಯಕ್ರಮದ ಮೂಲಕ ಕವಿಗಳ ಮನೆಮನೆಗಳನ್ನು ತಲುಪಿ, ಕವಿತೆಗಳನ್ನು ಓದಿಸಿ ಅದನ್ನು ವಿಡಿಯೋ ರೆಕಾರ್ಡ್ಸ್ ಮೂಲಕ ಸಂಗ್ರಹಿಸಿದ ಕ್ರಮ ಆ ಸಂದರ್ಭಕ್ಕೆ ವಿಶೇಷವಾಗಿತ್ತು. ಇಂದಿಗೂ ಕೂಡ ಆ ಸಂಗ್ರಹಗಳು ಕವಿಗಳನ್ನು ಕುರಿತಾದ ಲೈಬ್ರರಿಗಳಾಗಿವೆ.
ಕಲೆಯ ಬಗ್ಗೆ ಅವರಿಗೆ ಅಪಾರವಾದ ಆಸಕ್ತಿಯಿತ್ತು. ಈ ಹಿನ್ನೆಲೆಯಲ್ಲಿ ಕಲೆ ಮತ್ತು ರಸಾಸ್ವಾದನೆ, ಆರ್.ಎಸ್.ಎನ್. ವ್ಯಕ್ತಿ ಮತ್ತು ಕಲೆ(ಸಂ), ಆರ್.ಎಂ. ಹಡಪದ್ ಮುಂತಾದ ಕೃತಿಗಳು ಕಲೆಯ ಬಗ್ಗೆ ಅವರಿಗಿ ಆಸಕ್ತಿಯನ್ನು ತೋರುತ್ತವೆ. ಶಂಗಾರ ಲಹರಿ ಕೃತಿಗೆ ಲಲಿತಾ ಕಲಾ ಅಕಾಡೆಮಿ ಪ್ರಶಸ್ತಿ, ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಒಳಗೊಂಡಂತೆ ಹಲವು ಗೌರವಗಳಿಗೆ ಅವರು ಭಾಜನರಾಗಿದ್ದರು.
ಎಂ.ಎಚ್.ಕೆ ಹಾಗೂ ಜಿ.ಎಸ್. ಸಿಲಿಂಗಯ್ಯ ನವರ ಸಂಪಾದಕತ್ವದಲ್ಲಿ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾದ ಸಾಲುದೀಪಗಳು ಐದು ಪರಿಷ್ಕೃತ ಮುದ್ರಣಗಳನ್ನು ಕಂಡಿದೆ. ಆಧುನಿಕವಾಗಿ, ಜಾಗತಿಕವಾಗಿ ಬೆಳೆದು ನಿಂತಿರುವ ಬೆಂಗಳೂರನ್ನು ಪರಿಚಯಿಸುವ ಉದಯಭಾನು ಕಲಾಸಂಘ ಪ್ರಕಾಶನದಿಂದ ಪ್ರಕಟವಾದ ಬೆಂಗಳೂರು ದರ್ಶನ, ನವಕರ್ನಾಟಕ ಪ್ರಕಾಶನ ಸಂಸ್ಥೆಯ ಕರ್ನಾಟಕದ ಎಲ್ಲ ಕಲಾಪ್ರಕಾರವನ್ನು ಪರಿಚಯಿಸುವ ಕರ್ನಾಟಕ ಕಲಾದರ್ಶನ ಕೃತಿಯ ಸಂಪುಟಗಳ ಸಂಪಾದಕರಲ್ಲಿ ಒಬ್ಬರಾಗಿ ಮಹತ್ತರ ಕಾರ್ಯ ನಿರ್ವಹಿಸಿದರು. ಈ ಸಂಪಾದನಾ ಕಾರ್ಯದಲ್ಲಿ ಕಲೆಯ ಬಗ್ಗೆ ತಮಗಿದ್ದ ಸಂಪೂರ್ಣ ಜ್ಞಾನವನ್ನು ಅವರು ಬಳಸಿಕೊಂಡರು.
ಅರ್.ಎಸ್.ಎನ್ (ನಾಯ್ಡು) ಕೃತಿ ವಿಶಿಷ್ಟವಾಗಿದ್ದು ಈ ಕೃತಿಯಲ್ಲಿ ನಾಯ್ಡು ಅವರ ವ್ಯಕ್ತಿತ್ವವನ್ನು ಇತರರಿಗಿಂತ ಭಿನ್ನವಾಗಿಯೇ ರೂಪಿಸುತ್ತಾರೆ. ಈ ಕೃತಿಯಲ್ಲಿ ನಾಯ್ಡು ಅವರನ್ನು ಬೊಹೀಮಿಯನ್ ಬದುಕಿಗೆ ಹೊಂದಿಕೊಂಡವರು ಎಂದು ಗುರುತಿ ಸುತ್ತಾರೆ. ಒಮ್ಮೆ ಕೈಲಾಸಂ ಸಿಗರೇಟ್ ಸೇದಿದ ತುಂಡೊದನ್ನು ಕಾರ್ಪೆಟ್ಟಿಗೆ ಹೊಸಗುತ್ತಾರೆ. ಆಗ ನಾಯ್ಡು ಅವರು ಆ ಕಾರ್ಪೆಟ್ ಮಾಡಿದವನ ಕಲೆಗಾರಿಕೆಗೆ ಹಾಗೂ ಅದರ ಸೌಂದರ್ಯಕ್ಕೆ ದಕ್ಕೆ ಉಂಟುಮಾಡಿದರು ಎಂದ ಕೈಲಾಸಂ ಬಗ್ಗೆ ಸಿಟ್ಟಿಗೆ ಪ್ರಸಂಗವನ್ನು ಇಲ್ಲಿ ಉಲ್ಲೇಖಿಸುತ್ತಾರೆ. ಇನ್ನೊಮ್ಮೆ ಬೇಂದ್ರೆ ಅವರ ಶಿಲ್ಪ ರಚಿಸಿದ ಸಂದರ್ಭದಲ್ಲಿ ಅದನ್ನು ನೋಡಿದ ಬೇಂದ್ರೆ ನಾನು ಅಷ್ಟೊಂದು ಸುಂದರ ವಾಗಿಲ್ಲ ಎಂದು ಪ್ರತಿ ಕ್ರಿಯಿಸುತ್ತಾರೆ. ಆಗ ಆರ್.ಎಸ್.ಎನ್ ದೈವ ಸೃಷ್ಟಿಯನ್ನು ಸುಂದರಗೊಳಿ ಸುವುದೇ ನನ್ನ ಕಲಾಕೃತಿಗಳ ಉದ್ದೇಶವೆನ್ನುತ್ತಾರೆ. ಇಂತಹ ಹಲವು ಸಣ್ಣದಾದರೂ ಮೌಲಿಕವಾದ ಘಟನೆಗಳ ಮೂಲಕ ವ್ಯಕ್ತಿತ್ವ ಕಟ್ಟಿಕೊಡುವ ಕಲೆ ಎಂ.ಎಚ್.ಕೆ ಅವರಿಗೆ ಸಿದ್ದಿಸಿತ್ತು.
ಸಾಹಿತ್ಯವಾಗಲಿ, ಕಲೆಯಾಗಲಿ, ರಂಗಭೂಮಿ ಯಾಗಲಿ ಅಪೂರ್ವವಾದ ತಿಳುವಳಿಕೆ ಹಾಗೂ ಜ್ಞಾನವನ್ನು ಹೊಂದಿ ಎಂ.ಎಚ್.ಕೃಷ್ಣಯ್ಯ ನಮ್ಮ ನಡುವಿನ ಕೆಲವೇ ಬೆರಳೆಣಿಕೆಯ ವಿದ್ವಾಂಸರಲ್ಲಿ ಒಬ್ಬರಾಗಿರು. ಅದಾವ ನಮ್ಮ ಜೋಳ, ಉಳಿದಾವ ನಮ್ಮಹಾಡ ಎನ್ನುವಂತೆ ಶಾರೀರಕವಾಗಿ ಅಳಿದರೂ ಕೃತಿಗಳ ಮೂಲಕ, ಮಾಸದ ನೆನಪುಗಳ ಮೂಲಕ ಅವರು ನಮ್ಮೊಂದಿಗೆ ಸದಾ ಉಳಿದಿದ್ದಾರೆ.