ಗುತ್ತಿಗೆದಾರರ ಸಂಘದ ಮೇಲೆ ಮಾನನಷ್ಟ ಮೊಕ್ಕದ್ದಮೆ ಹಾಕುತ್ತೇನೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನಿನ್ನೆ ನನ್ನ ಹೆಸರು ಹೇಳಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರದ ಸಚಿವರು 40% ಕಮಿಷನ್ ಕೇಳುತ್ತಾರೆ ಎಂದು ಆರೋಪ ಮಾಡಿದ್ದಾರೆ. ಆದರೆ, ಇದುವರೆಗೆ ಯಾವುದೇ ದಾಖಲೆ ಕೊಟ್ಟಿಲ್ಲ. 50 ಕೋಟಿಗಳಷ್ಟು ಮಾನನಷ್ಟ ಮೊಕ್ಕದ್ದಮೆ ಹಾಕಲಾಗುವುದು. ಸಂಘದ ಎಲ್ಲರ ಮೇಲೂ ಮಾನನಷ್ಟ ಮೊಕ್ಕದ್ದಮೆ ಹೂಡುತ್ತೇನೆ. 14 ತಿಂಗಳಿಂದ ಬರೀ ಆರೋಪ ಮಾಡುತ್ತಾ ಬರುತ್ತಿದ್ದಾರೆ. ನ್ಯಾಯಾಲಯಕ್ಕೆ ಬಂದು ದಾಖಲೆಗಳನ್ನು ಕೊಡಲಿ ಎಂದರು.