ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿ. ವೀರೇಂದ್ರ ಪಾಟೀಲರ (Veerendra Patil) ಪತ್ನಿ ಶಾರದಾ ಪಾಟೀಲ (93) ಅವರು ಬೆಂಗಳೂರಿನ ಸದಾಶಿವನಗರದ ಸ್ವಗೃಹದಲ್ಲಿ ಮಂಗಳವಾರ ನಿಧನರಾದರು.
ವೀರೇಂದ್ರ ಪಾಟೀಲ್-ಶಾರದಾ ಪಾಟೀಲ್ ದಂಪತಿಗೆ ಕೈಲಾಶನಾಥ್ ಮತ್ತು ಇಬ್ಬರು ಪುತ್ರಿಯರಿದ್ದಾರೆ. ವೀರೇಂದ್ರ ಪಾಟೀಲ್ ಅವರು 1968-1971 ಅವಧಿಯಲ್ಲಿ ರಾಜ್ಯದ ಏಳನೇ ಮುಖ್ಯಮಂತ್ರಿಯಾಗಿದ್ದರು. ಚಿಂಚೋಳಿಯಲ್ಲಿರುವ ವೀರೇಂದ್ರ ಪಾಟೀಲರ ಸಮಾಧಿ ಪಕ್ಕದಲ್ಲೇ ಶಾರದಾ ಪಾಟೀಲರ ಅಂತ್ಯಕ್ರಿಯೆ ಬುಧವಾರ ಅಪರಾಹ್ನ ನಡೆಯಲಿದೆ ಎಂದು ಕೈಲಾಸನಾಥ ಪಾಟೀಲ ತಿಳಿಸಿದ್ದಾರೆ.