ಮಹಾ ಕುಂಭಮೇಳವನ್ನು ವಿಜೃಂಭಣೆಯಿಂದ ಆಚರಣೆ ಮಾಡಿ ದೇಶಕ್ಕೆ ತ್ರಿವೇಣಿ ಸಂಗಮ ಪರಿಚಯಿಸಲಾಗುತ್ತಿದೆ. ಕುಂಭದ ಶಕ್ತಿಯನ್ನು ವಿಸರ್ಜನೆ ಮಾಡಿ ನಾಡಿಗಾಗಿ, ದೇಶಕ್ಕಾಗಿ, ವಿಶ್ವದ ಸುಖ, ಶಾಂತಿ ಸಮೃದ್ಧಿಯಾಗಲಿ ಎಂಬ ಉದ್ದೇಶದಿಂದ ಮಹಾ ಕುಂಭಮೇಳ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಚಂದ್ರವನಾಶ್ರಮದ ಡಾ. ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿಯವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಮಹಾ ಕುಂಭಮೇಳ ಕುರಿತು ಮಾಹಿತಿ ಹಂಚಿಕೊಳ್ಳಲು ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಒಂದು ನದಿಯ ದರ್ಶನ ಮಾಡಿದರೆ ಪುಣ್ಯ ಎಂದರೆ, ಮೂರು ನದಿಗಳು ಸಂಗಮವಾಗುವ ತ್ರಿವೇಣಿ ಸಂಗಮವನ್ನು ಸ್ಪರ್ಶಿಸಿ ನಮಸ್ಕರಿಸಿದರೆ ಪಾಪ ವಿಮೋಚನೆಯಾಗುತ್ತದೆ ಎಂದರು.