ಮಂಡ್ಯ: ಕೆಆರ್ ಪೇಟೆಯ ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳದ ಪ್ರಯುಕ್ತ ವಿಶೇಷ ಗಂಗಾರತಿ ಆಯೋಜಿಸಲಾಗಿತ್ತು.
ವಾರಾಣಸಿಯಿಂದ ಗಂಗಾರತಿ ಮಾಡುವ ಕರೆಸಿ ಹೇಮಾವತಿ, ಲಕ್ಷ್ಮಣ ತೀರ್ಥ, ಕಾವೇರಿ ನದಿಯ ಸಂಗಮದಲ್ಲಿ ವಿಶೇಷವಾಗಿ ಗಂಗಾರತಿ ನೆರವೇರಿಸಲಾಯಿತು.
ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರು, ಚಂದ್ರವನದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಯವರೊಂದಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರು ಪಾಲ್ಗೊಂಡಿದ್ದರು.