ಮಳೆಯಿಂದ ಜಲಾವೃತವಾದ ಯಲ್ಲಮ್ಮ ದೇವಸ್ಥಾನ

ಯಲ್ಲಮ್ಮ ದೇವಿ ದೇವಸ್ಥಾನ
Advertisement

ಬೆಳಗಾವಿ: ರಾಜ್ಯದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಅವಾಂತರಕ್ಕೆ ಇಲ್ಲಿನ ಕೊಕಟನೂರ ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನ ಜಲಾವೃತವಾಗಿದೆ.
ಕಳೆದ ರಾತ್ರಿ ಮಹಾರಾಷ್ಟ್ರ ಹಾಗೂ ಗಡಿ ಪ್ರದೇಶಗಳಲ್ಲಿ ಸುರಿದ ಮಳೆಯಿಂದಾಗಿ ದೇವಸ್ಥಾನದ ಮುಂಭಾಗ ಹಳ್ಳದಲ್ಲಿ ಅಪಾರ ಪ್ರಮಾಣದ ನೀರು ಹರಿದು ದೇವಸ್ಥಾನದ ಒಳಗೆ ಮಳೆ ನೀರು ಪ್ರವೇಶ ಮಾಡಿದೆ.
ಮೊಳಕಾಲ ಉದ್ದಕ್ಕೂ ನೀರಿನ ಮಧ್ಯದಲ್ಲಿ ಶಕ್ತಿ ದೇವತೆಗೆ ಪೂಜಾ ಕೈಂಕರ್ಯಗಳು ಮುಂದುವರೆದಿವೆ. ನೀರಿನಲ್ಲಿ ಅಲ್ಪ ಪ್ರಮಾಣದ ಒಳಹರಿವು ಇರುವುದರಿಂದ ಭಕ್ತರು ದೂರಿನಿಂದಲೇ ದೇವತೆಯ ದರ್ಶನ ಪಡೆದುಕೊಳ್ಳುತ್ತಿದ್ದಾರೆ.