ಮರಾಠ ಬ್ರಿಗೇಡ್ ಜೊತೆ ಮೈತ್ರಿ

ಉದ್ಧವ್ ಠಾಕ್ರೆ
Advertisement

ಮುಂಬೈ: ಮರಾಠ ಸಮುದಾಯದ ಸಂಘಟನೆ ಸಂಭಾಜಿ ಬ್ರಿಗೇಡ್ ಜೊತೆ ಮೈತ್ರಿ ಮಾಡಿಕೊಂಡಿರುವುದಾಗಿ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಪ್ರಕಟಿಸಿದ್ದಾರೆ.
ಏಕನಾಥ ಶಿಂದೆ ಬಂಡಾಯ ಎದ್ದು ಶಿವಸೇನಾವನ್ನು ಒಡೆದ ನಂತರ ಠಾಕರೆ ತತ್ತರಿಸಿ ಹೋಗಿದ್ದಾರೆ ಎನ್ನುವ ಭಾವನೆ ಮೂಡಿರುವಾಗ ಹೊಸ ಪ್ರಯತ್ನ ಅವರಿಂದ ನಡೆಯುತ್ತಿದೆ. ಸಂಭಾಜಿ ಬ್ರಿಗೇಡ್ ಹೋರಾಟದ ತತ ಸಿದ್ಧಾಂತಗಳನ್ನಿಟ್ಟುಕೊಂಡಿದೆ ಎಂದ ಠಾಕರೆ, ಬಿಜೆಪಿ ಆರ್‌ಎಸ್‌ಎಸ್ ಸಿದ್ಧಾಂತಗಳಿಗೆ ಬದ್ಧವಾಗಿಲ್ಲ ಎಂದು ಟೀಕಿಸಿದ್ದಾರೆ.
ಶಿಂದೆ ಅವರನ್ನು ಗುತ್ತಿಗೆ ಸಿಎಂ ಎಂದು ಕರೆದಿದ್ದಾಗಿ ಪ್ರಕಟವಾಗಿರುವ ವರದಿಯನ್ನು ಅಲ್ಲಗಳೆದರು. ಮರಾಠ ಬ್ರಿಗೇಡ್ ಮತ್ತು ಶಿವಸೇನಾ ಒಟ್ಟಾಗಿ ಸುಸೂತ್ರವಾಗಿ ಕೆಲಸ ಮಾಡುವ ದೃಷ್ಟಿಯಿಂದ ಒಂದು ಸಮನಯ ಸಮಿತಿ ಯನ್ನು ರಚಿಸಲಾಗುವುದು ಎಂದು ಬ್ರಿಗೇಡ್‌ನ ಮುಖ್ಯಸ್ಥ ಮನೋಜ್ ಆಖರೆ ತಿಳಿಸಿದ್ದಾರೆ.