ಮಮ್ತಾ ಜಾಗತಿಕ ಸಾಹಿತ್ಯ ಪ್ರಶಸ್ತಿ ಪಡೆದಿರುವುದು ನಾಡಿಗೆ ಹೆಮ್ಮೆಯ ವಿಚಾರ

Advertisement

ಬೆಂಗಳೂರು: ಮಮ್ತಾ ಸಾಗರ್ ಅವರು ಜಾಗತಿಕ ಸಾಹಿತ್ಯ ಪ್ರಶಸ್ತಿ ಪಡೆದಿರುವುದು ನಾಡಿಗೆ ಹೆಮ್ಮೆಯ ವಿಚಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಜಾಗತಿಕ ಸಾಹಿತ್ಯ ಪ್ರಶಸ್ತಿಯನ್ನು ಪಡೆದ ಖ್ಯಾತ ಕವಯತ್ರಿ ಡಾ|| ಮಮ್ತಾ ಸಾಗರ್ ಅವರು ಇಂದು ನನ್ನನ್ನು ಭೇಟಿಯಾದ ಸಂದರ್ಭದಲ್ಲಿ ಅವರ ಸಾಧನೆಯನ್ನು ಶ್ಲಾಘಿಸಿ, ಅಭಿನಂದಿಸಿದೆ.

ಏಪ್ರಿಲ್ 4 ರಿಂದ 6 ರವರೆಗೆ ನೈಜೀರಿಯಾದ ಅಬುಜ ನಗರದಲ್ಲಿ ಜಾಗತಿಕ ಬರಹಗಾರರ ಒಕ್ಕೂಟ ಆಯೋಜಿಸಿದ್ದ ಏಳನೇ ಅಂತಾರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ಮಮ್ತಾ ಸಾಗರ್ ಅವರು ಜಾಗತಿಕ ಸಾಹಿತ್ಯ ಪ್ರಶಸ್ತಿ ಪಡೆದಿರುವುದು ನಾಡಿಗೆ ಹೆಮ್ಮೆಯ ವಿಚಾರ.

ವೈವಿಧ್ಯತೆಯನ್ನು ಸಂಭ್ರಮಿಸುವ ಮೂಲಕ ಹೊಸ ಏಕತೆಯ ಕುರಿತು ಚಿಂತಿಸುವ ಅಗತ್ಯವಿದೆ ಎಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಿಂತು ಮಮ್ತಾ ಸಾಗರ್ ಅವರು ಜಗತ್ತಿಗೆ ಕರೆಕೊಟ್ಟಿದ್ದನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ ಎಂದಿದ್ದಾರೆ.