ಮತದಾರರಿಗೆ ಫೋಟೋವುಳ್ಳ ಕುಕ್ಕರ್: ಸಮಗ್ರ ತನಿಖೆ

Advertisement

ಬೆಂಗಳೂರು: ಕಾಂಗ್ರೆಸ್‌ನ ನಾಲ್ಕೈದು ಶಾಸಕರು ಅವರ ಚಿತ್ರವುಳ್ಳ ಕುಕ್ಕರ್ ಮತದಾರರಿಗೆ ಕೊಟ್ಟಿರುವುದು ಸಾಕ್ಷಿ ಸಮೇತ ದೊರೆತಿದೆ. ಕುಣಿಗಲ್ ನಲ್ಲಿ ಸಿಕ್ಕು ವಾಣಿಜ್ಯ ತೆರಿಗೆ ಇಲಾಖೆಯವರು ಹಿಡಿದು ನಾಲ್ಕು ಜನರಿಗೆ ದಂಡ ವಿಧಿಸಿದ್ದಾರೆ. ಈ ಬಗ್ಗೆ ಸಮಗ್ರವಾಗಿ ಮಾಹಿತಿ ಪಡೆದು ತನಿಖೆ ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಾಂಗ್ರೆಸ್‌ನವರು ತಮ್ಮ ಎಲೆಯಲ್ಲಿ ಇಷ್ಟೆಲ್ಲಾ ಇಟ್ಟುಕೊಂಡು ಜನರಲ್ಲಿ ಗೊಂದಲ ಉಂಟು ಮಾಡುವಷ್ಟು ತಳಮಟ್ಟಕ್ಕೆ ಇಳಿದಿದ್ದಾರೆ. ಸೋಲುತ್ತೇವೆ ಎನ್ನುವುದು ಅವರಿಗೆ ಗ್ಯಾರಂಟಿ ಆಗಿದೆ. ಹೀಗಾಗಿ ಈ ರೀತಿ ದೂರು ನೀಡುವುದು ಮಾಡುತ್ತಿದ್ದಾರೆ. ಪೊಲೀಸ್ ಹಾಗೂ ಕಾನೂನು ಇದೆ. ಕಾನೂನಿನ ಪ್ರಕಾರ ಕ್ರಮವಾಗಲಿ. ಈ ರೀತಿಯ ನೂರು ದೂರುಗಳನ್ನು ನಾವು ಅವರ ಮೇಲೆ ನೀಡಬಹುದು. ಅಂತಿಮವಾಗಿ ಜನ ತೀರ್ಮಾನ ಮಾಡುತ್ತಾರೆ. ಜನರಿಗೂ ಗೊತ್ತಿದೆ. ಇವರಿಂದ ನಾವು ಪಾಠ ಕಲಿಯಬೇಕಿಲ್ಲ. ಅವರು ಏನು ಮಾಡುತ್ತಾರೋ ಮಾಡಲಿ ಎಂದರು.