ಬಾಗಲಕೋಟೆ(ರಬಕವಿ-ಬನಹಟ್ಟಿ): ಯುವ ಸಮುದಾಯ ಸೇರಿದಂತೆ ಎಲ್ಲರೂ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವಂತೆ ಜಾಗೃತಿ ಮೂಡಿಸಲು, ತಾಲೂಕಾಡಳಿತವು ಸ್ವೀಪ್ ಎಕ್ಸ್‌ಪ್ರೆಸ್ ವಾಹನಕ್ಕೆ ಮಂಗಳಮುಖಿ, ವಿಕಲಚೇತನರಿಂದ ಚಾಲನೆ ನೀಡುವುದರೊಂದಿಗೆ ಸಂಚಾರಿ ಅಣುಕು ಮತಗಟ್ಟೆ ಅಭಿಯಾನಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ ಹಸಿರು ನಿಶಾನೆ ತೋರಿಸಿದರು.
ರಬಕವಿ-ಬನಹಟ್ಟಿ ತಾಲೂಕಾಡಳಿತದ ಆವರಣದಲ್ಲಿ ಸ್ವೀಪ್ ವತಿಯಿಂದ ಮತದಾನದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಜ್ಜುಗೊಳಿಸಿದ ಜಾಗೃತಿ ಸಂಚಾರಿ ವಾಹನಕ್ಕೆ ಚಾಲನೆ ನೀಡಲಾಯಿತು.
ಸಿದ್ನಾಳ ಮಾತನಾಡಿ, ಪ್ರಜಾಪ್ರಭುತ್ವದ ಭದ್ರತೆಗೆ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದರು.
ಪ್ರತಿ ಬಾರಿ ನಗರ ಪ್ರದೇಶದಿಂದ ಕಡಿಮೆ ಮತದಾನವಾಗುತ್ತಿರುವುದರಿಂದ ಈ ಬಾರಿ ಶೇ. 85ರಷ್ಟು ಮತದಾನವಾಗಲೇಬೇಕೆಂಬ ಉದ್ದೇಶ ಹೊಂದಲಾಗಿದ್ದು, ಎಲ್ಲರೂ ಮತದಾನ ಮಾಡುವ ಮೂಲಕ ಉತ್ತಮ ನಾಗರಿಕ ಮತದಾರರಾಗಬೇಕೆಂದರು. ನಗರಸಭೆ, ಕಂದಾಯ ಸೇರಿದಂತೆ ಅನೇಕ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.