ಭ್ರೂಣ ಪತ್ತೆ: ಗಂಡಾದರೆ ಉಡುಗೊರೆ ಹೆಣ್ಣಾದರೆ ಕಗ್ಗೊಲೆ

Advertisement

ಗಂಡು ಭ್ರೂಣ ಪತ್ತೆಯಾದಾರೆ ಉಡುಗೊರೆ, ಹೆಣ್ಣು ಭ್ರೂಣ ಪತ್ತೆಯಾದರೆ ಕಗ್ಗೊಲೆ

ಬೆಂಗಳೂರು: ಭ್ರೂಣ ಪತ್ತೆ ಹತ್ಯೆಯ ದಂಧೆ ಹೆಣ್ಣು ಕಂದಮ್ಮಗಳ ಪ್ರಾಣ ಕಸಿದುಕೊಳ್ಳುತ್ತಿವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಭ್ರೂಣ ಪತ್ತೆ ಹತ್ಯೆಯ ದಂಧೆ ಹೆಣ್ಣು ಕಂದಮ್ಮಗಳ ಪ್ರಾಣ ಕಸಿದುಕೊಳ್ಳುವ ಜೊತೆಗೆ, ರಹಸ್ಯವಾಗಿ ಗರ್ಭಪಾತ ಮಾಡಿಸಿಕೊಳ್ಳುತ್ತಿರುವ ಮಹಿಳೆಯರನ್ನೂ ಅಪಾಯಕ್ಕೆ ದೂಡಿ ಜೀವ ತೆಗೆಯುತ್ತಿದೆ.
ಈ ಪ್ರಕರಣದ ಆಳ-ಅಗಲ, ಗಂಭೀರತೆ, ಮತ್ತು ಇದರ ಹಿಂದಿರುವ ಪ್ರಭಾವಿ ಶಕ್ತಿಗಳನ್ನು ಅಂದಾಜಿಸಿಯೇ ನಾನು ಈ ಪ್ರಕರಣದ ತನಿಖೆಗೆ ಎಸ್ ಐಟಿ ರಚಿಸಬೇಕು, ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಬೇಕು ಎಂದು ಕಳೆದ ವರ್ಷ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಒತ್ತಾಯಿಸಿದ್ದು.
ಮಹಿಳೆಯರ ವೋಟಿಗಾಗಿ ಅವರ ಮೂಗಿಗೆ ತುಪ್ಪ ಸವರುವ ಶಕ್ತಿ, ಗೃಹಲಕ್ಷ್ಮಿ ಗ್ಯಾರೆಂಟಿಗಳನ್ನು ನೀಡಿದರೆ ಮಹಿಳೆಯರ ಸಬಲೀಕರಣ ಆಗುವುದಿಲ್ಲ ಸಿಎಂ ಸಿದ್ದರಾಮಯ್ಯನವರೇ, ಹುಟ್ಟುವ ಮೊದಲೇ ಹೆಣ್ಣು ಮಕ್ಕಳ ಪ್ರಾಣ ಕಸಿದುಕೊಳ್ಳುವ, ಅಪಾಯಕಾರಿ ಗರ್ಭಪಾತ ಮಾಡಿಸಿ ಮಹಿಳೆಯರ ಜೀವ ತೆಗೆಯುವ ಈ ಅಮಾನುಷ ಜಾಲವನ್ನು ಭೇದಿಸುವ ಮೂಲಕ ಮಹಿಳಾ ಸಬಲೀಕರಣದ ಬಗ್ಗೆ ತಮ್ಮ ನಿಜವಾದ ಬದ್ಧತೆ ತೋರಿಸಿ ಎಂದಿದ್ದಾರೆ.