ಭ್ರಷ್ಟಾಚಾರ, ಕಾಂಗ್ರೆಸ್ ಎರಡು ಒಂದೆ

ಪ್ರಲ್ಹಾದ್ ಜೋಶಿ
Advertisement

ಹುಬ್ಬಳ್ಳಿ: ದೆಹಲಿಯಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮನೆಯ ಮುಂದೆ ಕಾಂಗ್ರೆಸ್ ನಾಯಕರು ಅಲೆದಾಡುವುದನ್ನು ನೋಡಿದರೆ, ಕಾಂಗ್ರೆಸ್ ಹಾಗೂ ಭ್ರಷ್ಟಾಚಾರ ಎರಡು ಒಂದೆ ಎಂದು ತಿಳಿಯುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಭ್ರಷ್ಟಾಚಾರ ರಕ್ತ ಬೀಜಾಸುರರನ್ನು ಹುಟ್ಟಿಸಿದ್ದು ಕಾಂಗ್ರೆಸ್. ಈ ಬಗ್ಗೆ ಹಿಂದಿನ ಗವರ್ನರ್ ಆದವರು ಹಣ ನೀಡಿದರೇ ಕಾಂಗ್ರೆಸ್ ನಲ್ಲಿ ಟಿಕೆಟ್ ದೊರೆಯುತ್ತದೆ ಎಂದು ಹೇಳಿರುವುದೇ ಸಾಕ್ಷಿ ಎಂದರು.
ಬಿಜೆಪಿ ವಿರುದ್ಧವಾಗಿ ಬಹಳ ಮಾತನಾಡಿದರೇ ಪ್ರಿಯಾಂಕಾ ಖರ್ಗೆ ರಾಷ್ಟ್ರೀಯ ನಾಯಕರಾಗುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್ ಬೂತ್ ಕಾಲದ ಪಕ್ಷವಾಗಿದೆ. ಆಧಾರ ರಹಿತ ಆರೋಪ ಮಾಡುವುದು ರೂಢಿಯಾಗಿದೆ. ದೇಶ ಹಾಗೂ ರಾಜ್ಯದಲ್ಲಿಯೂ ಭ್ರಷ್ಟಾಚಾರ ಆರಂಭವಾಗಿದ್ದೆ ಕಾಂಗ್ರೆಸ್ ಕಾಲದಲ್ಲಿ. ಮಾಜಿ ಪ್ರಧಾನಿ ನೆಹರೂ ಅವರನ್ನು ಹಿಡಿದು ಪ್ರಸ್ತುತ ಕಾಲದವರೆಗೂ ಕಾಂಗ್ರೆಸ್‌ನವರು ಹಗರಣಗಳನ್ನು ಮಾಡಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರಿಂದ ಹಿಡಿದು ಪ್ರಿಯಾಂಕ ಖರ್ಗೆ ಕಾಲದವರೆಗೆ ಭ್ರಷ್ಟಾಚಾರಮಯ ವ್ಯವಸ್ಥೆ ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ನಾಯಿ ಮರಿ ಹೇಳಿಕೆ ಕುರಿತು ಪ್ರತಿಕ್ರಿಸಿದ ಪ್ರಲ್ಹಾದ ಜೋಶಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯ ಮಂತ್ರಿಯಾದವರು ಗಣತೆ ಗೌರವ ಇಟ್ಟುಕೊಂಡು ಮಾತನಾಡಬೇಕು. ಇದೇ ಕಾಂಗ್ರೆಸ್ ಪಕ್ಷದಲ್ಲಿ ನಾಯಕರನ್ನು ಗುಲಾಮಿತನದಲ್ಲಿ ನೋಡುತ್ತಿದ್ದರು. ಅಲ್ಲದೇ ಕೀಳಾಗಿ ನಾಯಕರನ್ನು ಕಾಣುತ್ತಿದ್ದರು. ರಾಹುಲ್ ಹಾಗೂ ಸೋನಿಯಾ ಗಾಂಧಿ ಚುನಾಯಿತ ಪ್ರತಿನಿಧಿಗಳು ಅಲ್ಲ. ಖರ್ಗೆ ಅವರ ತಂದೆಯೂ ಸಹ ಗಾಂಧಿ ಪರಿವಾರ ಆಶೀರ್ವಾದದಿಂದ ಬಂದಿದ್ದಾರೆ ಎಂದರು.