ಭಾರಿ ಮಳೆ: ಬಾದಾಮಿ ಪಟ್ಟಣದಲ್ಲೆಲ್ಲ ನೀರೋ.. ನೀರು..!

ಬಾದಾಮಿ
Advertisement

ಬಾದಾಮಿ: ಐತಿಹಾಸಿಕ ಬಾದಾಮಿ ಪಟ್ಟಣದಲ್ಲಿ ಬುಧವಾರ ಮಧ್ಯಾಹ್ನದ ಹೊತ್ತಿಗೆ ರಭಸದಿಂದ ಬಿದ್ದ ಭಾರಿ ಮಳೆಯಿಂದ ನಗರದ ಪ್ರಮುಖ ರಸ್ತೆಯನ್ನು ಸಂಪೂರ್ಣ ಆವರಿಸಿಕೊಂಡ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಕೆಲ ಹೊತ್ತು ಸಂಕಷ್ಟ ತಂದೊಡ್ಡಿತು. ಆ ನೀರಿನ ರಭಸಕ್ಕೆ ವಾಹನಗಳು ಮುಳಗಿ ಹೋಗಿದ್ದವು. ಅಷ್ಟೊಂದು ನೀರು ರಸ್ತೆ ಮೇಲಿತ್ತು.
ಅದೇ ರೀತಿ ಸುತ್ತ ಮುತ್ತಲಿನ ಪ್ರದೇಶದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಬಿದ್ದ ಭಾರಿ ಮಳೆಯಿಂದ ಪಟ್ಟಣದ ಕೆಲ ಬಡಾವಣೆಗಳು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಲಾಸುರನ ಅವಾಂತರ ಸೃಷ್ಟಿಯಾಗಿದೆ. ಬಡಾವಣೆಯ ಕೆಲ ತಗ್ಗು ಪ್ರದೇಶಗಳಲ್ಲಿ ಹಾಗೂ ಹಳ್ಳ, ಕೊಳ್ಳದ ಸಮೀಪವಿರುವ ಜಮೀನಿನಲ್ಲಿ ಭಾರಿ ಪ್ರಮಾಣದ ನೀರು ಹೊಕ್ಕು ಜನರನ್ನು ಸಂಕಷ್ಟಕ್ಕೆ ದೂಡಿದೆ.
ನಗರದ ಚರಂಡಿಗಳು ತುಂಬಿ ರಸ್ತೆಯ ಮೇಲೆಲ್ಲ ಹರಿಯ ತೊಡಗಿವೆ. ಅದೇ ರೀತಿ ಕಾಯಿಪಲ್ಲೆ ಮಾರುಕಟ್ಟೆ ಮತ್ತು ಕಿರಾಣಿ ಮಾರುಕಟ್ಟೆಯಲ್ಲಿ ಮಳೆ ನೀರು ಸಂಗ್ರಹವಾಗಿದೆ. ಇಲ್ಲಿ ನೀರು ಹರಿದು ಹೋಗಲು ಸಮರ್ಪಕ ಮಾರ್ಗ ಇಲ್ಲದಿರುವುದರಿಂದ ಪ್ರತಿ ಬಾರಿಯೂ ಇಲ್ಲಿ ನೀರು ಸಂಗ್ರಹವಾಗಿ ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ತೊಂದರೆ ಆಗುತ್ತಿದೆ ಎಂಬುದು ಅಲ್ಲಿನ ವರ್ತಕರ ಆಕ್ರೋಶವಾಗಿದೆ.

ಬಾದಾಮಿ