ಭಾರತ ಬೃಹತ್‌ ಮೊತ್ತ

Advertisement

ಶ್ರೇಯಸ್‌ ಅಯ್ಯರ್‌ ಮತ್ತು ಕೆ.ಎಲ್‌. ರಾಹುಲ್‌ ಅವರ ಭರ್ಜರಿ ಶತಕದ ನೆರವಿನಿಂದ ಭಾರತ ನೆದರಲೆಂಡ್ಸ್‌ ವಿರುದ್ಧ ಬೃಹತ್‌ ಮೊತ್ತ ದಾಖಲಿಸಿದೆ.
ಭಾರತ 50 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 410ರನ್‌ಗಳನ್ನು ಗಳಿಸಿದೆ. ಆರಂಭದಲ್ಲಿ ರೋಹಿತ್‌ ಮತ್ತು ಗಿಲ್‌ ಜೋಡಿ 11.5 ಓವರ್‌ಗಳಲ್ಲಿ 100 ರನ್‌ಗಳ ಜತೆಯಾಟ ನಡೆಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿತು. ಶ್ರೇಯಸ್ ಅಯ್ಯರ್‌ ಅಜೇಯ 128(94 ಎಸೆತ 10 ಬೌಂಡರಿ, 5ಸಿಕ್ಸರ್)‌ ಕೆ.ಎಲ್‌. ರಾಹುಲ್‌ 102(64 ಎಸೆತ, 11ಬೌಂಡರಿ, 4 ಸಿಕ್ಸರ್‌) ಗಳಿಸಿದರು.