ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಆರಂಭದಲ್ಲೇ ಆಲ್ರೌಂಡರ್ ರವೀಂದ್ರ ಜಡೇಜಾ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ರವೀಂದ್ರ ಜಡೇಜಾ ನಾಲ್ಕನೇ ದಿನ ತನ್ನ ಖಾತೆಗೆ ಕೇವಲ 12 ರನ್ ಸೇರಿಸಿ ಟೋಡ್ ಮರ್ಫಿಗೆ ವಿಕೆಟ್ . ಜಡೇಜಾ ಒಟ್ಟು 84 ಎಸೆತಗಳನ್ನು ಎದುರಿಸಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 28 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ವಿರಾಟ್ ಕೋಹ್ಲಿ ತಮ್ಮ 75 ನೇ ಶತಕ ಸಿಡಿಸಿ ದಾಖಲೆ ಬರೆದರಲ್ಲದೆ, ಟೀಂ ಇಂಡಿಯಾದ ಮೊತ್ತವನ್ನು ನಾಲ್ಕುನೂರರ ಗಡಿ ದಾಟಿಸಿದ್ದಾರೆ. ಆಸ್ಟ್ರೇಲಿಯಾದ ಸ್ಕೋರ್ ಮುಟ್ಟಲು 77 ರನ್ ಅವಶ್ಯಕತೆ ಇದೆ.