ಭಾರತಕ್ಕೆ ಆಫ್ರಿಕಾದಿಂದ ಮತ್ತೆ 12 ಚೀತಾಗಳು ಇಂದು ಆಗಮಿಸಿವೆ. ದಕ್ಷಿಣ ಆಫ್ರಿಕಾದಿಂದ 12 ಚೀತಾಗಳು ಇಂದು ಮಧ್ಯ ಪ್ರದೇಶಕ್ಕೆ ಅಗಮಿಸಿವೆ. ಚೀತಾಳನ್ನು ಹೊತ್ತಿದ್ದ ವಾಯುಪಡೆಯ ವಿಮಾನವೊಂದು ಗ್ವಾಲಿಯರ್ ವಾಯುನೆಲೆಗೆ ಬೆಳಗ್ಗೆ 10 ಗಂಟೆಗೆ ಬಂದಿಳಿಯಿತು. ಬಳಿಕ ಆ ಚೀತಾಗಳನ್ನು ಹೆಲಿಕಾಪ್ಟರ್ಗಳ ಮೂಲಕ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗಿದೆ. ಈ ಚೀತಾಗಳನ್ನು ಕ್ವಾರಂಟೈನ್ ಪ್ರದೇಶಕ್ಕೆ ಬಿಡುಗಡೆ ಮಾಡಲಿದ್ದಾರೆ.