ಭಕ್ತಿಯಿಂದ ಹಾಗೆ ಮಾಡಿದೆ: ಸಲಗರ್

ಶರಣು ಸಲಗರ
Advertisement

ಬೀದರ್:‌ ನಾನು ಓರ್ವ ಹಿಂದು ಕಾರ್ಯಕರ್ತ ಮತ್ತು ಅಪ್ಪಟ ರಾಮನ ಭಕ್ತನಾಗಿ ರಾಮನ ಮೇಲಿನ ಅತಿಯಾದ ಪ್ರೇಮದಿಂದ, ಭಕ್ತಿಯಿಂದ ನಾನು ರಾಮನ ಪುತ್ಥಳಿಯ ತೊಡೆಯ ಮೇಲೆ ಹತ್ತಿದ್ದು ಸತ್ಯ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಶಾಸಕ ಶರಣು ಸಲಗರ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, “ಸಮಿತಿಯ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಭಕ್ತಿಯಿಂದ ರಾಮನಿಗೆ ಮಾಲಾರ್ಪಣೆ ಹಾಕಿ ಪೂಜೆ ಮಾಡಿದ್ದೇನೆ. ನಂತರ ಕೆಳಗಿಳಿದು ತೊಡೆಗೆ ಮುಟ್ಟಿ ನಮಸ್ಕರಿಸಿದ್ದೇನೆ. ತಪ್ಪು ಅನಿಸಿದರೆ ಅಪ್ಪಟ ರಾಮ ಭಕ್ತನಾಗಿ ವಿಷಾದ ವ್ಯಕ್ತಪಡಿಸುತ್ತೇನೆ, ಕ್ಷಮೆ ಯಾಚಿಸುತ್ತೇನೆ” ಎಂದು ಶಾಸಕ ಸಲಗರ್ ಘಟನೆಗೆ ಪ್ರತಿಕ್ರಿಯಿಸಿ ನೀಡಿದ ಹೇಳಿಕೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಡಿದೆ.