ಮಂಗಳೂರು: ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಬ್ರಾಹ್ಮಣ ಸಂಘಟನೆಯನ್ನು ಬಲಪಡಿಸಿ ಬ್ರಾಹ್ಮಣ್ಯದ ಉಳಿವಿನತ್ತ ಐಕ್ಯತೆಯೊಂದಿಗೆ ಶ್ರಮಿಸೋಣ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.
ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ರಂಗ ಮಂಟಪದಲ್ಲಿ ಇಂದು ಕೂಟ ಮಹಾಜಗತ್ತು ಸಾಲಿಗ್ರಾಮ ಕೇಂದ್ರ ಸಂಸ್ಥೆ ಮತ್ತು ಕಾಟಿಪಳ್ಳ ಕೃಷ್ಣಾಪುರ ಅಂಗ ಸಂಸ್ಥೆಯ ಸಹಭಾಗಿತ್ವದಲ್ಲಿ ಕೇಂದ್ರೀಯ ಮಹಾಧಿವೇಶನ ಮತ್ತು 69ನೇ ವಾರ್ಷಿಕ ಮಹಾಸಭೆ ಯಕ್ಷಗಾನ ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಆಧುನಿಕತೆಯೊಂದಿಗೆ ಹಿಂದೂ ಹಾಗೂ ಪೌರಾಣಿಕ ಹಿನ್ನಲೆಯ ಸನಾತನ ಸಂಸ್ಕೃತಿಯ ಮುಂದುವರಿಕೆ ಅಗತ್ಯ ಯುವ ಸಮುದಾಯ ಬ್ರಾಹ್ಮಣ್ಯತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ಸಂಘಟಿತರಾಗಿ ರೂಪಿಸಿಕೊಳ್ಳಬೇಕಾಗಿದೆ. ಸ್ವಾತಂತ್ರ್ಯದ ಅಮೃತಮಹೋತ್ಸವದ ಹೊಸ್ತಿಲಲ್ಲಿದ್ದ ನಾವು ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಾಹ್ಮಣದ ಕೊಡುಗೆ ಅನನ್ಯವಾಗಿದ್ದು ಮುಂದಿನ ಗಾಂಧಿ ಜಯಂತಿಯಂದು ಸ್ವಾತಂತ್ರ್ಯದ ಹೋರಾಟದ ಕೊಡುಗೆಯಾಗಿ ನಮ್ಮ ಸಮಾಜದ ಎಲ್ಲ ಸ್ತರದ ಸಂಘಟನೆಯ ಒಗ್ಗೂಡುವಿಕೆಯೊಂದಿಗೆ ವಿಪ್ರ ಸಂಗಮ ಹಾಗೂ ವಿಶಿಷ್ಟ ಕಾರ್ಯಕ್ರಮ ಹಾಗೂ ನಡಿಗೆ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಕೂಟ ಬ್ರಾಹ್ಮಣರು ವಿಪ್ರ ಸಂಘಟನೆಯ ಬಲಶಕ್ತಿಯಾಗಿದೆ ಸಂಘಟಿತ ಮನೋಭಾವದಿಂದ ಮುಂದಿನ ಸದ್ಭವಿಷ್ಯದಲ್ಲಿ ಬ್ರಾಹ್ಮಣತ್ವ ರಾಷ್ಟ್ರೀಯ ಶಕ್ತಿಯಾಗಿ ರೂಪುಗೊಳ್ಳಲು ಧೀ ಶಕ್ತಿಯನ್ನು ಅಳವಡಿಸಿಕೊಳ್ಳಬೇಕು ಎಂದ ಅವರು ಕೇಂದ್ರ ಸರಕಾರವು ಸಂವಿಧಾನ ತಿದ್ದುಪಡಿ ಮೂಲಕ ಆಥಿಕವಾಗಿ ದುರ್ಬಲ ಹೊಂದಿವರಿಗೆ ಮೀಸಲಾತಿ ಪ್ರಕಟಿಸಿದ್ದು ಈ ಮೀಸಲಾತಿಯ ಅನುಕೂಲತೆಗಳು ಇನ್ನು ಕೂಡ ಬ್ರಾಹ್ಮಣ ಸಮುದಾಯಕ್ಕೆ ಬಂದಿಲ್ಲ ಎಂದು ಖೇದ ವ್ಯಕ್ತಪಡಿಸಿದ ಅವರು ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಜೊತೆಗೆ ಸಾಕಷ್ಟು ಚರ್ಚಿಸಿದರೂ ಫಲಪ್ರದವಾಗಿಲ್ಲ ಈ ಬಗ್ಗೆ ಹೋರಾಟ ಆನಿವಾರ್ಯ ಎಂದರು.