ಬ್ಯಾರಲ್ ಸೇತುವೆ ನಿರ್ಮಿಸಿ ಪರಿಹಾರ ಕಂಡುಕೊಂಡ ರೈತರು

ಬಾಗಲಕೋಟೆ: ನಿತ್ಯ ಸಂಚಾರಕ್ಕೆ ಸರ್ಕಾರಕ್ಕೆ ಮನವಿ ಮಾಡಿ ಬೇಸತ್ತ ಕೃಷ್ಣಾ ತೀರದ ರೈತರು ತಮ್ಮ ಅನುಕೂಲಕ್ಕಾಗಿ ತಾವೇ ಬ್ಯಾರಲ್ ಸೇತುವೆ ನಿರ್ಮಿಸಿಕೊಂಡು ಗಮನ ಸೆಳೆದಿದ್ದಾರೆ.ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮದ ಮುಳುಗಡೆ ಸಂತ್ರಸ್ತ ರೈತರು ಹಲವು ವರ್ಷಗಳಿಂದ ಸೇತುವೆ ನಿರ್ಮಿಸಿಕೊಡುವಂತೆ ಸರ್ಕಾರಕ್ಕೆ ದುಂಬಾಲು ಬಿದ್ದಿದ್ದರು. ಆದರೆ ಆಳುವ ಸರ್ಕಾರಗಳು ನಿರ್ಲಕ್ಷಿಸುತ್ತಲೇ ಬಂದಿದ್ದವು. ಇದರಿಂದ ಬೇಸತ್ತ ರೈತರು ತಾವೇ ಸೇತುವೆಯೊಂದನ್ನು ನಿರ್ಮಿಸಿಕೊಂಡರು.ಕೇವಲ ಬ್ಯಾರಲ್‌ಗಳನ್ನು ಬಳಸಿಕೊಂಡು ೬೦೦ ಅಡಿ ಉದ್ದ ಹಾಗೂ ೮ ಅಡಿ ಅಗಲದ ಬ್ಯಾರೇಜ್‌ನ್ನು ರೈತರು ನಿರ್ಮಿಸಿಕೊಂಡಿದ್ದು, ಜನ-ಜಾನುವಾರು, … Continue reading ಬ್ಯಾರಲ್ ಸೇತುವೆ ನಿರ್ಮಿಸಿ ಪರಿಹಾರ ಕಂಡುಕೊಂಡ ರೈತರು