ರಟ್ಟೀಹಳ್ಳಿ: ಪಟ್ಟಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನಾವರಣ ಕಾರ್ಯಕ್ರಮದ ಮುನ್ನ ಜರುಗಿದ ಬೈಕ್ ರ‍್ಯಾಲಿ ಸಂಧರ್ಭದಲ್ಲಿ ಕೆಲವು ಕಿಡಿಗೇಡಿಗಳು ನಡೆಸಿದ ಕಲ್ಲು ತೂರಾಟದಿಂದ ವಾಹನ ಜಖಂ ಆಗಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ಮಂಗಳವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 15 ಜನರನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ
ಬೈಕ್ ರ‍್ಯಾಲಿ ಪಟ್ಟಣದ ಮಹಾಲಕ್ಷ್ಮೀ ದೇವಸ್ಥಾನದಿಂದ ಪ್ರಾರಂಭವಾಗಿ ಶಿವಾಜಿ ನಗರ ಹಳೆ ಬಸ್ ನಿಲ್ದಾಣ ಕೋಟೆ ಮೂಲಕ ಕಾರಂಜಿ ಸರ್ಕಲ್ ಬಳಿ ಬಂದಾಗ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು. ಈ ಸಂದರ್ಭದಲ್ಲಿ ಕೆಲವು ವಾಹನಗಳು ಜಖಂಗೊಂಡವಲ್ಲದೇ, ಹಲವು ಮನೆಗಳ ಮೇಲೆ ಕಲ್ಲು ಬಿತ್ತು.
ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ವರಿಷ್ಠಾಧಿಕಾರಿ ಡಾ ಶಿವಕುಮಾರ, ಬೈಕ್ ರ‍್ಯಾಲಿ ಸಂಧರ್ಭದಲ್ಲಿ ಕಾರಂಜಿ ಸರ್ಕಲ್ ಬಳಿ ಸಾಮೂಹಿಕವಾಗಿ ಕಲ್ಲು ತೂರಾಟ ನಡೆಸಿದ್ದು ಇದರಿಂದ ಎಂಟರಿಂದ ಹತ್ತು ಮನೆಗಳ ಮೇಲೆ ಕಲ್ಲು ಬಿದ್ದು ಹಾನಿಯಾಗಿದೆ ಜೊತೆಗೆ ನಾಲ್ಕೇದು ವಾಹನಗಳು ಜಖಂಗೊಂಡಿವೆ ಎಂದು ತಿಳಿಸಿದ್ದಾರೆ.