ಬೈಕ್ ಮುಖಾಮುಖಿಯಲ್ಲಿ ಡಿಕ್ಕಿ: ಸಾವು ಇಬ್ಬರಿಗೆ ಗಾಯ

ಅಮೀನಸಾಬ ಚೌಧರಿ
ಮೃತಪಟ್ಟ ಅಮೀನಸಾಬ ಚೌಧರಿ
Advertisement

ಇಳಕಲ್: ಇಂದು ಮುಂಜಾನೆ ನಗರದ ಹೊರವಲಯದ ಸಿದ್ದಾರ್ಥ ಪ್ರೌಢಶಾಲೆಯ ಮುಂದೆ ನಡೆದ ಎರಡು ಬೈಕುಗಳ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಸ್ಥಳದಲ್ಲಿ ಮೃತಪಟ್ಟರೆ ಇಬ್ಬರಿಗೆ ತೀವ್ರ ಗಾಯಗಳಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಸೋಲಾಪುರ ಮಂಗಳೂರು ರಾಷ್ಟ್ರೀಯ ಹೆದ್ದಾರಿ ೫೦ ರ ಸಿದ್ದಾರ್ಥ ಶಾಲೆಯ ಬಳಿ ನಡೆದ ಈ ಭೀಕರ ಡಿಕ್ಕಿಯಲ್ಲಿ ಅಮೀನಸಾಬ ಶಾಮಿದಸಾಬ ಚೌಧರಿ ೨೮ ಸ್ಥಳದಲ್ಲಿ ಮೃತಪಟ್ಟರೇ ಇನ್ನೊಂದು ಬೈಕಿನ ಸಾಹಿಲ್ ಚಟ್ನಿಹಾಳ ಮತ್ತು ದರ್ಶನ ಶಿವಪೂಜಿಮಠ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಶಹರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪಿಎಸ್ ಐ ಕೃಷ್ಣವೇಣಿ ತನಿಖೆ ನಡೆಸಿದ್ದಾರೆ .