ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಬೈಕ್ ವ್ಹೀಲಿಂಗ್, ಕರ್ಕಶ್ ಸೈಲೆನ್ಸರ್ ಪೈಪ್ ಅಳವಡಿಸಿಕೊಂಡು ಬೈಕ್ ಓಡಿಸುತ್ತಿದ್ದ ಯುವ ಪಡೆಗೆ ಹುಬ್ಬಳ್ಳಿ-ಧಾರವಾಡ ಸಂಚಾರಿ ಠಾಣೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಸಾರ್ವಜನಿಕರಿಗೆ ನಿತ್ಯ ಕರ್ಕಶ್‌ವಾಗಿ ಧ್ವನಿಯ ಮೂಲಕ ಬೈಕ್ ಓಡಿಸಿ ತೊಂದರೆಯುಂಟು ಮಾಡುತ್ತಿದ್ದ ಬೈಕ್ ಸವಾರರನ್ನು ಗುರುತಿಸಿ, ೬೦ಕ್ಕೂ ಹೆಚ್ಚು ಬೈಕ್‌ಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸೈಲೆನ್ಸರ್ ಪೈಪ್ ಕಿತ್ತು ರೂಲರ್ ಮೂಲಕ ನಾಶಪಡಿಸುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ.
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ರವೀಶ್ ಸಿ.ಆರ್. ಹಾಗೂ ಸಂಚಾರಿ ವಿಭಾಗದ ಮುಖ್ಯಸ್ಥ ವಿನೋದ್ ಮುಕ್ತೇದಾರ ನೇತೃತ್ವದಲ್ಲಿ ದಾಳಿ ನಡೆಸಿದ ಉತ್ತರ, ದಕ್ಷಿಣ, ಪೂರ್ವ ಠಾಣಾ ಸಿಪಿಐಗಳು ೬೦ಕ್ಕೂ ಹೆಚ್ಚು ಬೈಕ್ ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಬಹು ದಿನಗಳಿಂದ ಜನರಿಗೆ ತೊಂದರೆ ಕೊಡುತ್ತಿದ್ದವರನ್ನು ವಿಶೇಷ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆದು ಉತ್ತರ ಸಂಚಾರಿ ಠಾಣೆ ಆವರಣದಲ್ಲಿ ಹಾಕಿ ರೋಡ್ ರೋಲರ್ ಮೂಲ ಪುಡಿ ಪುಡಿ ಮಾಡಿ ನಾಶ ಮಾಡಲಾಗಿದೆ.