ವಿಜಯಪುರ: ಭೂತನಾಳ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭಗೊಂಡಿದೆ ಎಂದು ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ. ವಿಜಯಪುರ ನಗರದ ಕುಡಿಯುವ ನೀರಿನ ಬವಣೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು “ಭೂತನಾಳ, ಮಮದಾಪೂರ, ಬೇಗಂ ತಲಾಬ್ ಕೆರೆಗಳಿಗೆ ನೀರು ತುಂಬಿಸುವ ಕಾರ್ಯದಿಂದ ವಿಜಯಪುರ ನಗರದ ಕುಡಿಯುವ ನೀರಿನ ಬವಣೆ ನೀಗಲಿದೆ ಎಂದಿದ್ದಾರೆ, ತಮ್ಮ ಸಂದೇಶದಲ್ಲಿ “ಮಳೆಯ ಅಭಾವದಿಂದ ಭೂತನಾಳ ಕೆರೆ ಬತ್ತಿ ವಿಜಯಪುರ ನಗರದ 10 ವಾರ್ಡುಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಆಗಿತ್ತು. 10-15ದಿನಗಳಿಗೊಮ್ಮೆ ನೀರು ಸರಬರಜು ಮಾಡಲು ಕಷ್ಟ ಆಗುತ್ತಿತ್ತು. ಇದೀಗ ಕೃಷ್ಣಾ ನದಿಯಿಂದ ಲಿಂಗದಳ್ಳಿ ಜಾಕ್ವಲ್ ನಿಂದ ನಿರೇತ್ತಿ ವಿಜಯಪುರದ ಐತಿಹಾಸಿಕ ಸಪ್ತ ಕೆರೆಗಳ ಪೈಕಿ ಮಮದಾಪೂರ, ಬೇಗಂ ತಲಾಬ್ ಮತ್ತು ಭೂತನಾಳ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭಗೊಂಡಿದೆ. ಇದರಿಂದ ವಿಜಯಪುರ ನಗರದ ಕುಡಿಯುವ ನೀರಿನ ಬವಣೆ ನೀಗಲಿದೆ.” ಎಂದಿದ್ದಾರೆ.