ಬೆಂಗಳೂರು: ಬೆಳ್ಳಂಬೆಳಗ್ಗೆ ಬಿಎಸ್ವೈ ಮನೆಗೆ ಸಿಎಂ ಬೊಮ್ಮಾಯಿ ದೌಡಾಯಿಸಿದ್ದು, ಬಿಎಸ್ವೈಗೆ ಮುರುಘಾಶ್ರೀ ಬಂಧನದ ಡಿಟೈಲ್ಸ್ ಕೊಟ್ಟಿದ್ದಾರೆ.
ಮುರುಘಾಶ್ರೀಗೆ ಬೆಂಬಲವಾಗಿ ನಿಂತಿದ್ದ ಮಾಜಿ ಸಿಎಂ ಬಿಎಸ್ವೈ, ಸ್ವಾಮೀಜಿ ಸತ್ವ ಪರೀಕ್ಷೆ ಗೆದ್ದು ಬರ್ತಾರೆ ಎಂದಿದ್ದರು.
ಮುರುಘಾಶ್ರೀ ನಿನ್ನೆ ಮಧ್ಯರಾತ್ರಿಯೇ ಚಿತ್ರದುರ್ಗ ಜೈಲು ಸೇರಿದ್ದಾರೆ. ಹೀಗಾಗಿ ಬಿಎಸ್ವೈ ತುರ್ತು ಭೇಟಿ ಮಾಡಿದ ಸಿಎಂ ಬೊಮ್ಮಾಯಿ, ಬಂಧನದ ಅನಿವಾರ್ಯತೆ ಬಗ್ಗೆ ಬಿಎಸ್ವೈಗೆ ಮನವರಿಕೆ ಮಾಡ್ತಿದ್ದಾರೆ.