ಬೆಳಗಾವಿ: ಲೋಕ ಸಮರಕ್ಕೆ ಕಹಳೆ ಮೊಳಗಿದಂತಿತ್ತು ಎಂದು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಬಂದಿರುವ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು “ಇಂದು ಚನ್ನಮ್ಮನ ನಾಡಿಗೆ, ಬೆಳಗಾವಿಯ ಭೂಮಿಗೆ, ಕಾಲಿಟ್ಟ ವೇಳೆಗೆ, ವಿಜಯ ಸಂಭ್ರಮ, ಕಮಲ ನಗೆಯ ಸ್ವಾಗತ, ಲೋಕ ಸಮರಕ್ಕೆ ಕಹಳೆ ಮೊಳಗಿದಂತಿತ್ತು”
ಬೆಳಗಾವಿಯಲ್ಲಿ ಇಂದಿನಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ತೆರಳಿದ ಸಂದರ್ಭದಲ್ಲಿ ವಿಮಾನ ನಿಲ್ದಾಣದಿಂದಲೂ ಬೃಹತ್ ರೋಡ್ ಶೋ ಮೂಲಕ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರೀತಿಪೂರ್ವಕವಾಗಿ ಸ್ವಾಗತಿಸಿದರು. ಪಂಚರಾಜ್ಯಗಳ ಬಿಜೆಪಿ ದಿಗ್ವಿಜಯದ ಬೆನ್ನಲ್ಲೆ ಪಕ್ಷದ ಕಾರ್ಯಕರ್ತರಲ್ಲಿರುವ ವಿಶ್ವಾಸ ಹಾಗೂ ಉತ್ಸಾಹ, ಲೋಕಸಮರದಲ್ಲಿ ಪ್ರಚಂಡ ವಿಜಯ ಸಾಧಿಸುವ ನಿಟ್ಟಿನಲ್ಲಿ ಟೊಂಕಕಟ್ಟಿ ನಿಂತಂತಿದೆ.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್, ಶಾಸಕ ಅಭಯ್ ಪಾಟೀಲ್, ಮಾಜಿ ಶಾಸಕ ಅನಿಲ್ ಬೆನಕೆ, ಮುಖಂಡ ಶಂಕರಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಸುಭಾಶ್ ಪಾಟೀಲ್, ಸಂದೀಪ್ ದೇಶಪಾಂಡೆ, ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು ಎಂದು ಬರೆದುಕೊಂಡಿದ್ದಾರೆ.