ಬೆಳಗಾವಿ ರಾಜಕಾರಣಿಗಳಿಂದ ಎಂಇಎಸ್ ಪೋಷಣೆ

ಬಾವುಟಾ
Advertisement

ಧಾರವಾಡ: ಬೆಳಗಾವಿಯದಲ್ಲಿ ನಮ್ಮ ರಾಜಕಾರಣಿಗಳೆ ಎಂಎಇಎಸ್ ಪೋಷಣೆ ಮಾಡುತ್ತಿದ್ದಾರೆ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಆರೋಪಿಸಿದರು.
ಧಾರವಾಡದಿಂದ ಬೆಳಗಾವಿಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ಎಂಇಎಸ್ ಅಷ್ಟು ಪುಂಡಾಟಿಕೆ ಮಾಡುತ್ತಿದೆ. ಇದಕ್ಕೆ ಬೆಳಗಾವಿ ರಾಜಕಾರಣಿಗಳೇ ಕಾರಣ. ಅವರು ರಣಹೇಡಿಗಳು. ಈ ಬಗ್ಗೆ ಮಾತನಾಡುವುದೇ ಇಲ್ಲ ಎಂದು ಕಿಡಿಕಾರಿದರು.
ಅಲ್ಲಿಯ ರಾಜಕಾರಣಿಗಳು ಮರಾಠಿಗರನ್ನು ಒಲೈಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಎಂಇಎಸ್ ಅಷ್ಟು ಗಲಭೆ ಮಾಡುತ್ತಿದೆ. ಬೆಳಗಾವಿ ರಾಜಕಾರಣಿಗಳಿಗೆ ಸ್ವಾಭಿಮಾನ ಎನ್ನುವುದು ಇದ್ದರೆ ಇನ್ನಾದರೂ ಸುಧಾರಿಸಲಿ. ನಮ್ಮ ನೆಲ, ಭಾಷೆ, ಗಡಿಯ ಸ್ವಾಭಿಮಾನ ಬೆಳಿಸಿಕೊಳ್ಳಲಿ ಎಂದರು.
ಮಹಾರಾಷ್ಟ್ರ ರಾಜಕಾರಣಿಗಳಿಗೆ, ಎಂಇಎಸ್‌ಗೆ ಬೇರೆ ಕೆಲಸ ಇಲ್ಲ. ಪದೇ ಪದೇ ಗಡಿ ವಿವಾದ ಕೆಣಕುತ್ತಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಮಧ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಆದರೂ ಜಿಲ್ಲಾಡಳಿತ ಸರಿಯಾಗಿ ತಡೆಯುವ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.

ಹಿರೇಬಾಗೇವಾಡಿ ಟೋಲ್ ಬಳಿ ಕರವೇ ಕಾರ್ಯಕರ್ತರನ್ನು ತಡೆದ ಪೊಲೀಸರು