ಹುಬ್ಬಳ್ಳಿ : ನಾವು ಬೆಳಗಾವಿ ಚನ್ನಮ್ಮ ವೃತ್ತಕ್ಕೆ ತೆರಳಲು ತೀರ್ಮಾನಿಸಿದ್ದೇವೆ. ಹೋಗಿಯೇ ಹೋಗುತ್ತೇವೆ. ಪೊಲೀಸರು ಹೇಗೆ ತಡೆಯುತ್ತಾರೊ ನೋಡ್ತೇವೆ ಎಂದು ಕರವೇ ರಾಜ್ಯ ಘಟಕದ ಅಧ್ಯಕ್ಷ ನಾರಾಯಣೌಡ ಸವಾಲು ಹಾಕಿದರು.
ಬೆಳಗಾವಿಗೆ ತೆರಳುವ ಮುನ್ನ ಧಾರವಾಡ ನಗರ ಹೊರವಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಪೊಲೀಸರು ತಡೆಯಬೇಕಾಗಿರುವುದು ಮಹಾರಾಷ್ಡ್ರದಿಂದ ಗಡಿ ಪ್ರದೇಶಕ್ಕೆ ಬಂದು ಪ್ರಚೋದನೆ ಮಾಡಲು ಯತ್ನಿಸುತ್ತಿರುವ ಸಚಿವರು,ಅಲ್ಲಿನ ಶಾಸಕರನ್ನ. ಬೆಳಗಾವಿ ನಮ್ಮದು. ಬೆಳಗಾವಿಯ ಚನ್ನಮ್ಮ ವೃತ್ತಕ್ಕೆ ತೆರಳುವ ನಮ್ಮನ್ನ ಪೊಲೀಸರು ತಡೆಯುವುದು ಸರಿಯಲ್ಲ. ತಡೆಯುವುದಾದರೆ ತಡೆಯಲಿ. ನಾವಂತೂ ಹೋಗುತ್ತೇವೆ ಎಂದು ನಾರಾಯಣಗೌಡ ಸ್ಪಷ್ಟಪಡಿಸಿದರು.
Home ನಮ್ಮ ಜಿಲ್ಲೆ ಧಾರವಾಡ ಬೆಳಗಾವಿ ಪೊಲೀಸರು ಮಹಾರಾಷ್ಡ್ರ ಸಚಿವರು, ಶಾಸಕರನ್ನ ತಡೆಯಲಿ, ನಮ್ಮನ್ನಲ್ಲ: ಕರವೇ ನಾರಾಯಣಗೌಡ