ಬೆಳಗಾವಿ : ಬೆಳಗಾವಿಯಲ್ಲಿ ಮತ್ತೆ ಜೈ ಮಹಾರಾಷ್ಟ್ರ ಚೌಕ ಎನ್ನುವ ಧ್ವಜ ಹಾಕಿ ಎಂಇಎಸ್ ಪುಂಡಾಟಿಕೆ ಮೆರೆದಿದೆ.
ಬೆಳಗಾವಿಯ ಅನಗೋಳ ಗ್ರಾಮದಲ್ಲಿ ಎಂಇಎಸ್ ಧ್ವಜ ಹಾಕಿರುವ ವಿಚಾರಕ್ಕೆ ಅಕ್ರೋಶ ವ್ಯಕ್ತವಾಗಿದ್ದು, ಮತ್ತೆ ಪುಂಡಾಟ ಮೆರೆಯಲು ಮುಂದಾದ ಎಂಇಎಸ್ ಪುಂಡರ ವಿರುದ್ದ ಬೆಳಗಾವಿಯಲ್ಲಿ ಕರುನಾಡು ವಿಜಯಸೇನೆ ಸಂಘಟನೆ ಕಾರ್ಯಕರ್ತರಿಂದ ಪಾಲಿಕೆ ಮುಂದೆ ಪ್ರತಿಭಟನೆ ನಡೆಯಿತು.
ಅನಗೋಳದಲ್ಲಿ ಜೈ ಮಹಾರಾಷ್ಟ್ರ ಚೌಕ ಎನ್ನುವ ಧ್ವಜ ಹಾಕಿರುವ ವಿಚಾರವಾಗಿ, ಅನಗೋಳದಲ್ಲಿ ಈಗಾಗಲೇ ಪೋಲಿಸ್ ಬಂದೂ ಬಸ್ತ್ ನಿಯೋಜನೆ ಕೂಡಾ ಮಾಡಲಾಗಿದೆ. ಜೈ ಮಹಾರಾಷ್ಟ್ರ ಚೌಕನ್ನ ಖಂಡಿಸಿ ಮಹಾನಗರ ಪಾಲಿಕೆ ಆಯುಕ್ತರ ವಾಹನಕ್ಕೆ ಮುತ್ತಿಗೆ ಹಾಕಿದ ಘಟನೆ ನಡೆಯಿತು. ಕರ್ನಾಕದಲ್ಲಿ ಕನ್ನಡಿಗನೆ ಸಾರ್ವಭೌಮ ಜೈ ಮಹಾರಾಷ್ಟ್ರ ಚೌಕ ಧ್ವಜ ತೆರವುಗೊಳಿಸಿ ಎಂದು ಕಾರ್ಯಕರ್ತರು ಪಟ್ಟು ಹಿಡಿದರು.