ಬೆಕ್ಕಿನ ಮರಿಗೆ ಹುಲಿ ಬಣ್ಣ ಬಳಿದು ಮಾರಾಟಕ್ಕೆ ಯತ್ನ

ಬೆಕ್ಕು
Advertisement

ಬೆಕ್ಕನ್ನು ಹುಲಿ ಮರಿಯಂತೆ ಸಿಂಗಾರ ಮಾಡಿ ಹುಲಿ ಮರಿ ಎಂದು ಮಾರಾಟ ಮಾಡಿ ಹಣ ಸುಲಿಗೆ ಮಾಡಲು ಯತ್ನಿಸಿದ ಯುವಕನೋರ್ವನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಗಡಿ ಗ್ರಾಮ ತಿರುವಣ್ಣಾಮಲೈ ಅರಣಿ ನಿವಾಸಿ ಪಾರ್ಥಿಬನ್(24) ಎಂಬಾತ ಬಂಧಿತ ವ್ಯಕ್ತಿ. ಈತ ಮೂರು ತಿಂಗಳ ಹುಲಿ ಮರಿಗಳು ಮಾರಾಟಕ್ಕಿವೆ, ಪ್ರತಿ ಮರಿಗೆ 25 ಲಕ್ಷ ರೂ. ಆಸಕ್ತರಿಗೆ ಅವರ ವಿಳಾಸಕ್ಕೆ ತಲುಪಿಸಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಕಳುಹಿಸಿದ್ದಾನೆ. ಈ ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳೀಯ ಪೊಲೀಸರ ನೆರವಿನಿಂದ ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಳಿಕ ವಿಚಾರಣೆಯಲ್ಲಿ ಬೆಕ್ಕಿನ ಮರಿಗೆ ಹುಲಿ ಮರಿಯಂತೆ ಬಣ್ಣ ಬಳಿದು ಮಾರಾಟಕ್ಕೆ ಯತ್ನಿಸಿದ್ದಾಗಿ ತಿಳಿಸಿದ್ದಾರೆ.