ಮಂಗಳೂರು: ಅಪರೂಪದ ಬೆಕ್ಕಿನ ಕಣ್ಣಿನ ಹಾವು ಪುತ್ತೂರು ಬಲ್ನಾಡಿನ ರವಿಕೃಷ್ಣ ಕಲ್ಲಜೆ ಎಂಬವರ ಮನೆಯಲ್ಲಿ ಪತ್ತೆಯಾಗಿದೆ.
ಈ ಹಾವು ಬೆಕ್ಕಿನ ಕಣ್ಣಿನಂತೆ ಹೊಳಪು ಹೊಂದಿರುವ ಕಾರಣ ಬೆಕ್ಕಿನ ಕಣ್ಣಿನ ಹಾವು ಎಂದು ಕರೆಯಲಾಗುತ್ತಿದೆ. ರಾತ್ರಿ ವೇಳೆಯ ಸಂಚಾರಿಯಾಗಿರುವ ಈ ವಿಷಕಾರಿಯಲ್ಲದ ನಿರುಪದ್ರವಿ ಫಾರೆಸ್ಟಿನ್ ಕ್ಯಾಟ್ ಸ್ನೇಕ್ ಸಣ್ಣ ಹಕ್ಕಿ, ಒತಿಕ್ಯಾತ, ಹಕ್ಕಿಗಳ ಮೊಟ್ಟೆಯನ್ನು ಬೇಟೆಯಾಡಿ ತಿನ್ನುತ್ತವೆ. ಹಳದಿ ಬಣ್ಣದಲ್ಲಿ ಕಂದು ಬಣ್ಣದ ಪಟ್ಟಿ ಹೊಂದಿರುವ ಹಾವನ್ನು ಪುತ್ತೂರಿನ ಉರಗತಜ್ಞ ತೇಜಸ್ ಬನ್ನೂರ್ ರಕ್ಷಣೆ ಮಾಡಿ ದೂರದ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.