ಬೆಂಗಳೂರು: ಹಿರಿಯ ರಾಜಕಾರಣಿ ಟಿ.ಜಾನ್ ನಿಧನ

Advertisement

ಬೆಂಗಳೂರು: ಹಿರಿಯ ರಾಜಕಾರಣಿ, ಕೊಡುಗೈ ದಾನಿ ಎಂದೇ ಖ್ಯಾತರಾಗಿದ್ದ ಟಿ. ಜಾನ್ (92) ಬೆಂಗಳೂರಿನ ಸ್ವನಿವಾಸದಲ್ಲಿ ನಿಧನರಾಗಿದ್ದಾರೆ. ಎಸ್‌ ಎಂ ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದರು. ಅಬಕಾರಿ ಉದ್ಯಮದ ಮೂಲಕ ಹೆಸರು ಮಾಡಿದ್ದರು. ಕಷ್ಟ ಹೇಳಿಕೊಂಡು ಯಾರೇ ಬಂದರು ಸಹಾಯಹಸ್ತ ಚಾಚುತ್ತಿದ್ದ ಟಿ.ಜಾನ್ ಅವರು ಕೊಡುಗೈ ದಾನಿಯೆಂದೇ ಖ್ಯಾತರಾಗಿದ್ದರು.’
ಮೂಲತಃ ಕೇರಳದವರಾದ ಟಿ.ಜಾನ್, ಕೊಡಗಿಗೆ ಬಂದು ಸಾಕಷ್ಟು ಕಷ್ಟಪಟ್ಟುರು. ಛಲದಿಂದ ಉದ್ಯಮದಲ್ಲಿ ತೊಡಗಿಕೊಂಢೂ ಹಂತ ಹಂತವಾಗಿ ಸಿರಿವಂತಿಕೆ ಪಡೆದುಕೊಂಡಿದ್ದರು. ಶಿಕ್ಷಣ ಸಂಸ್ಥೆಗಳು. ರೆಸಾರ್ಟ್ ಗಳನ್ನೂ ಕೂಡ ಜಾನ್ ಆರಂಭಿಸಿ ಯಶಸ್ಸು ಗಳಿಸಿದ್ದರು. ನಾಳೆ ಶನಿವಾರ ಬೆಂಗಳೂರಿನಲ್ಲಿ ಟಿ.ಜಾನ್ ಅವರ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.