ಬೀದಿ ನಾಯಿಗಳ ಹಾವಳಿಗೆ ಕೃಷ್ಣ ಮೃಗ ಸಾವು

Advertisement

ಚಿತ್ರದುರ್ಗ: ಚಿತ್ರದುರ್ಗ ಸಮೀಪದ ಬುಕ್ಕಂಬೂದಿ ಗ್ರಾಮದ ಬಳಿ ಅರಣ್ಯದಿಂದ ದಾರಿ ತಪ್ಪಿ ವಸತಿ ಪ್ರದೇಶಕ್ಕೆ ಬಂದ ಸಾರಂಗವನ್ನು ಬೀದಿ ನಾಯಿಗಳು ಕೊಂದು ಹಾಕಿವೆ. ಅಧಿಕಾರಿಗಳ ಪ್ರಕಾರ, ಚಳ್ಳಕೆರೆ ತಾಲೂಕಿನ ಬಕ್ಕಂಬುಡಿ ಗ್ರಾಮದ ಸಸಿಮರ ಕಾವಲು ಬಳಿ ಈ ಘಟನೆ ನಡೆದಿದೆ. ಸಾರಂಗದ ಮೇಲೆ ನಾಯಿಗಳ ದಾಳಿಯನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಸಾರಂಗವನ್ನು ರಕ್ಷಿಸಿದ್ದಾರೆ. ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಸಾರಂಗ ಮೃತಪಟ್ಟಿದೆ. ಹೃದಯಾಘಾತದಿಂದ ಕಾಡು ಪ್ರಾಣಿ ಮೃತಪಟ್ಟಿದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.