ಬೀದಿಗೆ ಬಿದ್ದ ಶ್ರೀ ಗದ್ದೆರಂಗ

Advertisement

ಶ್ರೀರಂಗಪಟ್ಟಣ: ಎಲ್ಲರಿಗೂ ಶ್ರೀರಂಗಪಟ್ಟಣದ ಶ್ರೀರಂಗನಾಥ, ಮಳವಳ್ಳಿಯ ಶ್ರೀ ಮದ್ಯರಂಗ ಹಾಗೂ ತಮಿಳುನಾಡಿನ ಶ್ರೀ ಅಂತ್ಯರಂಗ ಚಿರಪರಿಚಿತ.
ಆದರೆ ಎಲೆಮರೆಕಾಯಿಯಂತೆ ಬೆಳಕಿಗೆ ಬಾರದ ಸುಮಾರು 500 ವರ್ಷಗಳಿಗೂ ಪ್ರಾಚೀನ ಕಾಲದ ಶ್ರೀ ಗದ್ದೆರಂಗನಾಥ ಸ್ವಾಮಿ ದೇವಾಲಯ ಇಂದು ಬೆಂಗಳೂರು- ಮೈಸೂರು ಹೆದ್ದಾರಿ ರಸ್ತೆ ಕಾಮಗಾರಿಯಿಂದಾಗಿ ಇಂದು ಬೀದಿಗೆ ಬಿದ್ದಿದೆ.
ವಿಜಯನಗರ ಅರಸರ ಕಾಲದಲ್ಲಿ ಹೊಯ್ಸರಾಯರ(1945-1610) ಆಳ್ವಿಕೆಯಲ್ಲಿ ಶ್ರೀರಂಗಪಟ್ಟಣದ ಸ್ಕಾಟ್ ಬಂಗ್ಲೋ( ಇಂದಿನ ಪ್ರವಾಸಿ ಮಂದಿರದ ಹಿಂಭಾಗ) ಬಳಿ ನಿರ್ಮಿಸಲಾಗಿರುವ ದೇವಾಲಯದ ಸ್ಥಳ ಬದಲಾವಣೆಯ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ.
ಸುಮಾರು 8 ಅಡಿ ಉದ್ದದ ಉಬ್ಬು ಶಿಲೆಯಲ್ಲಿ ಶ್ರೀಗದ್ದೆ ರಂಗನಾಥ ಸ್ವಾಮಿಯು ಐದು ತಲೆಯ ಹೆಡೆ ಬಿಚ್ಚಿದ ಆದಿ ಶೇಷನ ಮೇಲೆ ಮಲಗಿರುವುದು ವಿಶೇಷ. ಜೊತೆಗೆ ಪಾದದ ಬಳಿ ಮಹಾಲಕ್ಷ್ಮಿಯು ಸೇವೆಯಲ್ಲಿ‌ ನಿರತಳಾಗಿದ್ದು, ತಲೆಯ ಭಾಗದಲ್ಲಿ ನಾರದ ಮಹರ್ಷಿಗಳ ಚಿತ್ರಣವಿದ್ದು, ಪಶ್ಚಿಮಾಭಿಮುಖವಾಗಿ ಮಲಗಿರುವ ಶ್ರೀರಂಗನಾಥ ಸ್ವಾಮಿಯ ‘ಅಭಯ ಹಸ್ತವುಳ್ಳ’ ಚಿತ್ರಣ ಮತ್ತೊಂದು ವಿಶೇಷ. ಹೆದ್ದಾರಿ ಕಾಮಗಾರಿ ಆರಂಬವಾದಾಗ ತೆರವುಗೊಂಡ ಈ ದೇವಾಲಯ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದ್ದರೂ ದೇವಾಲಯದ ಉದ್ಘಾಟನೆ ಆಗದಿರುವುದು ವಿಪರ್ಯಾಸ.