ಬಿ ವರದಿ ಸ್ವೀಕೃತ: ದೂರುದಾರನಿಗೆ ನೋಟಿಸ್

ಕಮಲಾಕರ ಮೇಸ್ತ
Advertisement

ಹೊನ್ನಾವರ: ಪರೇಶ ಮೇಸ್ತ ಸಾವು ನೀರಿನಲ್ಲಿ ಮುಳುಗಿ ನಡೆದಿರುವುದಾಗಿ ವಿಧಿ ವಿಜ್ಞಾನ ತಜ್ಞರ ಹಾಗೂ ವೈದ್ಯರ ತಂಡ ನೀಡಿದ ವರದಿಯ ಆಧಾರದ ಮೇಲೆ ಸಿಬಿಐ ತನಿಖಾ ತಂಡ ಸಲ್ಲಿಸಿದ ಬಿ ತನಿಖಾ ವರದಿಯನ್ನು ನ್ಯಾಯಾಲಯ ಸ್ವೀಕರಿಸಿದ್ದು, ದೂರುದಾರ ಕಮಲಾಕರ ಮೇಸ್ತನಿಗೆ ನ. ೧೬ರಂದು ನ್ಯಾಯಾಲಯಕ್ಕೆ ಹಾಜರಾಗಲು ನೋಟಿಸು ಜಾರಿ ಮಾಡಿದೆ.
ಒಟ್ಟೂ ೨೩೪ ಸಾಕ್ಷಿದಾರರ ಸಾಕ್ಷಿಗಳನ್ನು ಹಾಗೂ ೨೫ಕ್ಕೂ ಹೆಚ್ಚು ತಾಂತ್ರಿಕ ಮತ್ತು ವೈಜ್ಞಾನಿಕ ದಾಖಲೆಗಳ ಪಟ್ಟಿಗಳ ಯಾದಿಯನ್ನು ತನಿಖಾ ವರದಿಯೊಂದಿಗೆ ಸೆ. ೨೯ರಂದು ಹೊನ್ನಾವರ ಜೆ.ಎಮ್.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಜೆ.ಎಮ್.ಎಫ್.ಸಿ ನ್ಯಾಯಾಧೀಶ ಚಂದ್ರಶೇಖರ ಬಣಕಾರ ವರದಿಯನ್ನು ಸ್ವೀಕರಿಸಿ, ದೂರುದಾರ ಕಮಲಾಕರ ಮೇಸ್ತನಿಗೆ ನ. ೧೬ರಂದು ನ್ಯಾಯಾಲಯಕ್ಕೆ ಹಾಜರಾಗಲು ನೋಟಿಸು ಹೊರಡಿಸಿ ಆದೇಶ ನೀಡಿದ್ದಾರೆ.
ತಮ್ಮ ಆದೇಶದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಬಿ.ಎಸ್.ಯಡಿಯೂರಪ್ಪ ವಿರುದ್ಧ ಕರ್ನಾಟಕ ಸರ್ಕಾರ ಹಾಗೂ ಇತರರು ಪ್ರಕರಣವನ್ನು ಉದಾಹರಿಸಿ, ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿದ ನಿರ್ದೇಶನದ ಪ್ರಕಾರ ದೂರುದಾರನಿಗೆ ನೋಟಿಸು ಹೊರಡಿಸಿರುವುದಾಗಿ ಹೊನ್ನಾವರ ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.