ಕ್ರಿಕೆಟ್ ದಿಗ್ಗಜ್ ಸಚಿನ್ ತಮ್ಮ ಪತ್ನಿ ಅಂಜಲಿ ಅವರೊಂದಿಗೆ ಮೈಕ್ರೋಸಾಫ್ಟ್ ಸಂಸ್ಥೆ ಸಂಸ್ಥಾಪಕ ಬಿಲ್‍ಗೇಟ್ಸ್ ಅವರನ್ನು ಭೇಟಿಯಾಗಿರುವ ಚಿತ್ರವನ್ನು ಹಂಚಿಕೊಂಡು ಭಾವನಾತ್ಮಕ ಸಾಲುಗಳನ್ನು ಟ್ವೀಟ್‌ನಲ್ಲಿ ಬರೆದಿದ್ದಾರೆ.
ನಾವೆಲ್ಲರೂ ಜೀವನದುದ್ದಕ್ಕೂ ವಿದ್ಯಾರ್ಥಿಗಳಾಗಿದ್ದೇವೆ. ನಮ್ಮ ಫೌಂಡೇಶನ್ – ಕೆಲಸ ಮಾಡುವ ಮಕ್ಕಳ ಶಿಕ್ಷಣ, ಆರೋಗ್ಯ ಸೇರಿದಂತೆ – ಲೋಕೋಪಕಾರದ ದೃಷ್ಟಿಕೋನಗಳನ್ನು ಪಡೆಯಲು ಇಂದು ಅದ್ಭುತವಾದ ಕಲಿಕೆಯ ಅವಕಾಶವಾಗಿದೆ. ಕಲ್ಪನೆಗಳನ್ನು ಹಂಚಿಕೊಳ್ಳುವುದು ಪ್ರಪಂಚದ ಸವಾಲುಗಳನ್ನು ಪರಿಹರಿಸಲು ಪ್ರಬಲ ಮಾರ್ಗವಾಗಿದೆ. ನಿಮ್ಮ ಒಳನೋಟಗಳಿಗೆ ಧನ್ಯವಾದಗಳು ಬಿಲ್‌ಗೇಟ್ಸ್ ಎಂದು ಸಚಿನ್ ಬರೆದುಕೊಂಡಿದ್ದಾರೆ.