ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ತೀವ್ರ ವಾಗ್ದಾಳಿ

Advertisement

ನವದೆಹಲಿ: ಮಣಿಪುರ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದದ “ಅವಿಶ್ವಾಸ ಗೊತ್ತುವಳಿ” ನಿರ್ಣಯದ ಮೇಲಿನ ಚರ್ಚೆಯಲ್ಲಿ ರಾಹುಲ್ ಗಾಂಧಿಯವರು ಅವಿಶ್ವಾಸ ನಿರ್ಣಯದ ಚರ್ಚೆಯ ವೇಳೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮಣಿಪುರ ಎರಡು ಹೋಳಾಗಿದೆ. ಸರ್ಕಾರದ ರಾಜಕೀಯ ಮಣಿಪುರದಲ್ಲಿ ಭಾರತವನ್ನು ಕೊಲೆ ಮಾಡಿದೆ ಎಂದು ರಾಹುಲ್‌ ಟೀಕಿಸಿದರು. ಮಣಿಪುರದ ಜನರನ್ನು ಕೊಲ್ಲುವ ಮೂಲಕ, ನೀವು ಭಾರತ ಮಾತೆಯ ಹಂತಕರಾಗಿದ್ದೀರಿ. ನೀವು ದೇಶದ್ರೋಹಿಗಳು, ದೇಶಭಕ್ತರಲ್ಲ ಎಂದು ರಾಹುಲ್‌ ಕಿಡಿ ಕಾರಿದರು. ಇವರು ಮಣಿಪುರದಲ್ಲಿ ಕೇವಲ ಮಣಿಪುರದ ಹತ್ಯೆ ಮಾಡಿಲ್ಲ. ಅವರು ಇಡೀ ಹಿಂದುಸ್ತಾನ್‌ನ ಹತ್ಯೆ ಮಾಡಿದ್ದಾರೆ. ಭಾರತ ಎನ್ನುವುದು ನಮ್ಮ ದನಿಯಾಗಿದೆ. ಭಾರತ ನಮ್ಮ ಜನರ ದನಿ, ಹೃದಯದ ಶಬ್ದವಾಗಿದೆ. ಮಣಿಪುರದಲ್ಲಿ ಇದೇ ದನಿಯನ್ನು ನೀವು ಹತ್ಯೆ ಮಾಡಿದ್ದೀರಿ. ಇದರ ಅರ್ಥ ಏನೆಂದರೆ, ನೀವು ಮಣಿಪುರದಲ್ಲಿ ಹತ್ಯೆ ಮಾಡಿರುವುದು ಭಾರತ ಮಾತೆಯನ್ನು. ಮಣಿಪುರದ ಜನರನ್ನು ಕೊಲೆ ಮಾಡುವ ಮೂಲಕ ನೀವು ಭಾರತ ಮಾತೆಯನ್ನು ಹತ್ಯೆ ಮಾಡಿದ್ದೀರಿ. ನೀವು ದೇಶದ್ರೋಹಿಗಳು. ನೀವೆಂದೂ ದೇಶಭಕ್ತರಾಗಲು ಸಾಧ್ಯವಿಲ್ಲ. ನೀವು ಮಣಿಪುರದಲ್ಲಿ ದೇಶದ ಹತ್ಯೆ ಮಾಡಿದ್ದೀರಿ ಎಂದು ಹೇಳಿದ್ದಾರೆ. ಭಾರತ ಮಾತೆಯನ್ನು ಹತ್ಯೆ ಮಾಡಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳಿದ ಮಾತಿಗೆ ಸ್ವತಃ ಸ್ಪೀಕರ್‌ ಓಂ ಬಿರ್ಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ದೇಶದ ಸಂಸತ್ತು. ಇಲ್ಲಿ ಭಾರತ ಮಾತೆಯನ್ನು ಹತ್ಯೆ ಮಾಡಿದ್ದಾರೆ. ಎನ್ನುವ ಪದಗಳನ್ನೆಲ್ಲಾ ಬಳಸಬಾರದು. ನೀವು ಹಿರಿಯ ಸಂಸದರಾಗಿದ್ದೀರಿ ಇದರ ಬಗ್ಗೆ ಎಚ್ಚರಿಕೆ ಇರಲಿ ಎಂದು ಹೇಳಿದರು.
ಸ್ಮೃತಿ ಇರಾನಿ ಖಂಡನೆ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಇದನ್ನು ಖಂಡಿಸಿದ್ದು ಭಾರತ ಮಾತೆಗೆ ಅಗೌರವ ತೋರುವ ಮಾತುಗಳನ್ನು ಸಹಿಸುವುದಿಲ್ಲ ನೀವು ಎಂದಿಗೂ ಭಾರತವಾಗಲು ಸಾಧ್ಯವಿಲ್ಲ. ನಿಮ್ಮಂಥ ಕುಟುಂಬ ರಾಜಕಾರಣ ಮಾಡುವವರಿಗೆ ಬ್ರಿಟಿಷರಿಗೆ ಭಾರತೀಯರು ಹೇಳಿದ್ದ ಕ್ವಿಟ್‌ ಇಂಡಿಯಾ ಮಾತನ್ನೇ ಹೇಳಬೇಕಾಗುತ್ತದೆ ಎಂದು ಹೇಳಿದ್ದಾರೆ.