ಬಿಜೆಪಿ ಜನ ಸ್ಪಂದನ ಕಾರ್ಯಕ್ರಮಕ್ಕೆ ಭರ್ಜರಿ ಸಿದ್ಧತೆ..!

Advertisement

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ನಾಳೆ ನಡೆಯಲಿರುವ ಸರ್ಕಾರದ ಜನಸ್ಪಂದನ ಸಮಾವೇಶಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ರಘುನಾಥಪುರದ ಮೈದಾನದಲ್ಲಿ ವೇದಿಕೆ ನಿರ್ಮಾಣವಾಗ್ತಿದೆ. ಬೊಮ್ಮಾಯಿ ಸರ್ಕಾರಕ್ಕೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. 10 ಸಾವಿರ ಆಸನ ವ್ಯವಸ್ಥೆ ಮಾಡಿದ್ದು, ವಿಐಪಿ ಮತ್ತು ವಿವಿಐಪಿಗಳಿಗೆ ಪ್ರತ್ಯೇಕ ಆಸನ ಮಾಡಲಾಗಿದೆ. ಕೇಸರಿ ವಸ್ತ್ರಗಳಿಂದ ವೇದಿಕೆಯ ಮುಂಭಾಗ ಅಲಂಕಾರ ಮಾಡಲಾಗಿದೆ. ಸ್ಟೇಜ್​ನ ಮುಂಭಾಗ ಸುಮಾರು 10 LED ಸ್ಕ್ರೀನ್​​ ಅಳವಡಿಕೆ ಮಾಡಲಾಗಿದೆ. ಸಚಿವ ಡಾ.ಕೆ.ಸುಧಾಕರ್ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲನೆ ಮಾಡಿದ್ರು. ಕೆಲ ಹೊತ್ತಿನಲ್ಲೇ ಸಚಿವರಾದ ಎಂಟಿಬಿ ನಾಗರಾಜ್, ಮುನಿರತ್ನ ಭೇಟಿ ನೀಡಲಿದ್ದಾರೆ.