ಅಂಜುಮನ್ ಇಸ್ಲಾಂ ಸಂಸ್ಥೆ ನಿರ್ಣಯ
ಇಳಕಲ್: ಬಿಜೆಪಿಯವರಿಗೆ ಮುಸ್ಲಿಂ ಮತ ಬೇಕಾಗಿಯೇ ಇಲ್ಲ ಇನ್ನು ನಾವು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಬಾರದು ಎಂದು ನಿರ್ಣಯ ಮಾಡಿದ್ದೇವೆ ಎಂದು ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಉಸ್ಮಾನಗಣಿ ಹುಮ್ನಾಬಾದ ಹೇಳಿದರು
ಸೋಮವಾರದಂದು ತಮ್ಮ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಮುಸ್ಲಿಂರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಬಿಜೆಪಿ ಸರಕಾರ ಮುಸ್ಲಿಂರನ್ನು ಟು ಎ ದಿಂದ ಹೊರಗೆ ಇಟ್ಟ ಕಾರಣ ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಅದಕ್ಕೆ ಸರಿಯಾದ ಪಾಠವನ್ನು ಕಲಿಸಿದ್ದೇವೆ ಆದರೆ ಕಾಂಗ್ರೆಸ್ ಸರಕಾರ ಸಹ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳದೇ ವಂಚಿಸಿದೆ ಪಂಚಮಸಾಲಿ ಸಮಾಜಕ್ಕೆ ಎರಡೂ ಪಕ್ಷಗಳಲ್ಲಿ ಬಲಾಢ್ಯ ನಾಯಕರಿದ್ದಾರೆ ಕಾಂಗ್ರೆಸ್ ದಲ್ಲಿ ಎಂ ಬಿ ಪಾಟೀಲ ಶಿವಾನಂದ ಪಾಟೀಲ ವಿಜಯಾನಂದ ಕಾಶಪ್ಪನವರ ವಿನಯ ಕುಲಕರ್ಣಿ ಬಿಜೆಪಿಯಲ್ಲಿ ಬಸನಗೌಡ ಪಾಟೀಲ ಯತ್ನಾಳ ಮುರುಗೇಶ ನಿರಾಣಿ ಸೇರಿದಂತೆ ಪ್ರಮುಖ ನಾಯಕರು ಇದ್ದು ಅವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ನಾವೇನು ಮಾಡಬೇಕು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ನಾಯಕರು ಸರಿಯಾದ ನಿರ್ಧಾರ ತೆಗೆದುಕೊಳ್ಳದೇ ಹೋದರೆ ಈ ಚುನಾವಣೆಯಲ್ಲಿ ಇಬ್ಬರಿಗೂ ಪಾಠ ಕಲಿಸೋಣ ಅದಕ್ಕಾಗಿ ರಾಜ್ಯಾದ್ಯಂತ ಮುಸ್ಲಿಂ ನಾಯಕರು ನಿರ್ಧಾರ ಮಾಡಬೇಕು ಎಂದು ಕರೆಕೊಟ್ಟರು. ಸುದ್ದಿಗೋಷ್ಠಿಯಲ್ಲಿ ಮೋದಿನಸಾಬ ಹುಣಚಗಿ ಹೈದರಾಲಿ ಹಳ್ಳಿ ಉಪಸ್ಥಿತರಿದ್ದರು