ರಾಯಚೂರು: ಟಿಕೆಟ್ ಕೈ ತಪ್ಪಿದ್ದರಿಂದ ಕೆಲ ನಾಯಕರು ಪಕ್ಷ ತೊರೆದಿರುವುದರಿಂದ ಬಿಜೆಪಿಗೆ ಸ್ವಲ್ಪ ಮಟ್ಟಿಗೆ ಧಕ್ಕೆಯಾಗುತ್ತಿರುವುದು ನಿಜ. ನಾಮಪತ್ರ ಸಲ್ಲಿಕೆ ಅವಧಿಯೊಳಗೆ ಈ ಡ್ಯಾಮೇಜ್ ನಿಯಂತ್ರಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಜಡತ್ವ ಇದೆ. ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಕಾಂಗ್ರೆಸ್ ನಾಯಕರಿಲ್ಲದೆ ಖಾಲಿಯಾಗಿತ್ತು. ಈಗ ಬಿಜೆಪಿ ನಾಯಕರನ್ನು ಸೇರಿಸಿಕೊಂಡು ಪಕ್ಷ ಭರ್ತಿಯಾಗುತ್ತಿದೆ ಎಂದು ಲೇವಡಿ ಮಾಡಿದರು.
ಬಿಜೆಪಿ ನಿಯಮದ ಪ್ರಕಾರ ಹಿರಿಯ ನಾಯಕರಿಗೆ ಟಿಕೆಟ್ ತಪ್ಪಿದೆ. ಆದರೆ, ಅವರಿಗೆ ಬೇರೆ ಉನ್ನತ ಹುದ್ದೆಗಳನ್ನು ನೀಡುವ ಭರವಸೆ ನೀಡಲಾಗಿತ್ತು. ಲಿಂಗಾಯತ ಸಮುದಾಯದ ಸಾಕಷ್ಟು ನಾಯಕರು ನಮ್ಮ ಪಕ್ಷದಲ್ಲಿ ಇದ್ದಾರೆ ಎಂದು ಹೇಳಿದರು.