ಬಾವುಟಗುಡ್ಡೆಯಲ್ಲಿ ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ‌ ಪ್ರತಿಮೆ ಲೋಕಾರ್ಪಣೆ

ಪ್ರತಿಮೆ
Advertisement

ಮಂಗಳೂರು ನಗರದ ಬಾವುಟಗುಡ್ಡೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ, ಸಂಘಟನಾ ಚತುರ, ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಕಂಚಿನ‌ ಪ್ರತಿಮೆಯನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನ.19ರ ಶನಿವಾರ ಲೋಕಾರ್ಪಣೆ ಮಾಡಿದರು.

ಮಂಗಳೂರಿಗೆ ಇವತ್ತು ಮಹತ್ವದ ದಿನ, ಇತಿಹಾಸಕ್ಕೆ ಮಹತ್ವ ಕೊಡುವ ದಿನ ಬೆಳಕಿಗೆ ಬಾರದ ರಾಮಯ್ಯ ಗೌಡರ ಕಥೆ ಈಗ ಸುದ್ದಿಗೆ ಬಂದಿದೆ ರಾಮಯ್ಯ ಗೌಡರಂಥ ನಿರಂತರ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಇತಿಹಾಸದಲ್ಲಿ ಇಂಥಹ ಮತ್ತಷ್ಟು ಸತ್ಯಗಳು ಹೊರಗೆ ಬರಬೇಕಿದೆ. ರಾಮಯ್ಯ ಗೌಡ ಒವ್ಬ ಶ್ರೇಷ್ಠ ಕ್ರಾಂತಿಕಾರಿ ಪುರುಷ ಅವರನ್ನು ಸೋಲಿಸಲು ಬ್ರಿಟಿಷ್ ಸೈನ್ಯ ಒಟ್ಟಾಗಿ ಬಂದು ಗಲ್ಲಿಗೇರಿಸಿತು, ಇಂಥಹ ಹೋರಾಟದ ಕಥೆ ಇಡೀ ದೇಶಕ್ಕೆ ಪರಿಚಯ ಆಗಬೇಕು ಇದೀಗ ಅವರ ಮೂರ್ತಿ ಸ್ಥಾಪನೆ ಮೂಲಕ ಅವರ ಇತಿಹಾಸ ಜಗತ್ತಿಗೆ ಗೊತ್ತಾಗಿದೆ ಇಂತಹ ಅನಾಮಧೇಯ ಹೋರಾಟಗಾರರು ನಮ್ಮಲ್ಲಿ ಬಹಳಷ್ಟು ಜನ ಇದಾರೆ ಇಂಥ ಅನಾಮಧೇಯ ಹೋರಾಟಗಾರರ ಸ್ಮಾರಕ ಮಾಡಲು ನನಗೆ ಸ್ಪೂರ್ತಿ ಬಂದಿದೆ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಇವತ್ತಿನ ಪೀಳಿಗೆಗೆ ಇದನ್ನ ತಿಳಿ ಹೇಳಿ ಸ್ಪೂರ್ತಿ ತುಂಬುವ ಕೆಲಸ ಆಗಬೇಕಿದೆ.
ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿದ್ಯ ವಹಿಸಿದ್ದರು.ಸಚಿವರಾದ ಎಸ್. ಅಂಗಾರ, ಡಾ. ಅಶ್ವತ್ಥ್ ನಾರಾಯಣ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾದ ಡಿ.ವಿ. ಸದಾನಂದ ಗೌಡ,ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಸಂಜೀವ ಮಠಂದೂರು, ಯಿ.ಟಿ. ಖಾದರ್, ಮಂಗಳೂರು ಮೇಯರ್ ಜಯಾನಂದ ಅಂಚನ್, ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹಾಗೂ ಇತರೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.