ಬಾಳೆಹಣ್ಣಿನ ಮೇಲೆ ರೈತರಿಗೆ ಕನ್ಯಾ ಕೊಡಲಿ ಎಂದು ಬರೆದು ರಥಕ್ಕೆ ಎಸೆದ ರೈತ

Advertisement

ಹಗರಿಬೊಮ್ಮನಹಳ್ಳಿ: ಇತ್ತೀಚಿನ ದಿನಗಳಲ್ಲಿ ಹುಡುಗರಿಗೆ ಹುಡುಗಿಯರನ್ನು ಹುಡುಕುವುದು ತಂದೆ-ತಾಯಿಗಳಿಗೆ ದೊಡ್ಡ ತಲೆನೋವಿನ ಕೆಲಸ ಆಗಿ ಪರಿಣಿಮಿಸಿದೆ. ಇಂತಹ ಸಂದರ್ಭದಲ್ಲಿ ಇಲ್ಲಿನ ರೈತನೊಬ್ಬ ಭೂಮಿಯಲ್ಲಿ ದುಡಿದು ಅನ್ನ ನೀಡುವ ರೈತರಿಗೆ ಹೆಣ್ಣು ಕೊಡಲಿ, ಜನರು ಮನಸ್ಸು ಬದಲಿಸಲಿ ಎಂದು ಬಾಳೆ ಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆದ ಘಟನೆ ತಾಲೂಕಿನ ಚಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಚಿಮ್ಮನಹಳ್ಳಿ ದುರ್ಗಾಂಬಾ ದೇವಿ ಜಾತ್ರೆ ಪ್ರಯುಕ್ತ ಹಗರಿ ಬಸವೇಶ್ವರ ರಥೋತ್ಸವವನ್ನು ಏರ್ಪಡಿಸಲಾಗಿತ್ತು. ರಥೋತ್ಸವ ನೋಡಲು ಬಂದವರಲ್ಲಿ ರೈತನೊಬ್ಬ ಎರಡು ಬಾಳೆಹಣ್ಣು ತೆಗೆದುಕೊಂಡು ಅದರ ಮೇಲೆ `ರೈತರಿಗೆ ಹೆಣ್ಣು ಕೊಡಲಿ ಜನರ ಮನಸ್ಸು ಬದಲಿಸಲಿ’ ಎಂದು ಬರೆದು ರಥಕ್ಕೆ ಎಸೆದಿದ್ದನು. ಈ ಬಾಳೆಹಣ್ಣು ಮತ್ತೊಬ್ಬ ವ್ಯಕ್ತಿಗೆ ಸಿಕ್ಕಿತ್ತು. ಅದರಲ್ಲಿ ಬರೆದಿದ್ದನ್ನು ಕಂಡು ಆಶ್ಚರ್ಯಗೊಂಡು ಇತರರಿಗೆ ತೋರಿಸಿದ್ದಾನೆ. ನಂತರ ಅದನ್ನು ಮೊಬೈಲ್‌ನಲ್ಲಿ ಹರಿಬಿಟ್ಟಿದ್ದಾನೆ.