ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವತಿಯಿಂದ 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಇಂದಿರಾ ಗ್ಲಾಸ್ ಹೌಸ್‌ನಲ್ಲಿ ಸಂಗೀತ ಸ್ಪರ್ಧೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಾಲ ಗಾಯಕಿಯ ಜೊತೆಗೆ ಮೇಯರ್, ಪಾಲಿಕೆ ಸದಸ್ಯರು ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಡು ಹಾಡಿ ಗಮನ ಸೆಳೆದರು.
ಪಾಲಿಕೆಯ ಸಭಾನಾಯಕ ತಿಪ್ಪಣ್ಣ ಮಜ್ಜಗಿ, ಸ್ಥಾಯಿ ಸಮಿತಿಯ ಅಧ್ಯಕ್ಷ ವಿಜಯಾನಂದ ಶೆಟ್ಟಿ, ಸುರೇಶ ಬೆದರೆ, ಶಿವು ಮೆಣಸಿನಕಾಯಿ, ವಿರೋಧ ಪಕ್ಷದ ನಾಯಕರಾದ ದೋರಾಜ್ ಮಣಿಕುಂಟ್ಲಾ, ಸಂದೀಲ್ ಕುಮಾರ, ಪಾಲಿಕೆಯ ಸದಸ್ಯರಾದ ಉಮೇಶ ಕೌಜಗೇರಿ, ನಾಲತವಾಡ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು