ಬಾಲಕಿ ಬಿಡಿಸಿದ ಚಿತ್ರ ಕೇಳಿ ಪಡೆದ ಮೋದಿ

Advertisement

ಬಾಗಲಕೋಟೆ: ಪ್ರಧಾನಿ ನರೇಂದ್ರ‌ ಮೋದಿ ಭಾಷಣದ ನಡುವೆ ಬಾಲಕಿ ಬಳಿಯಿದ್ದ ಫೋಟೋವನ್ನು ಕೇಳಿ ಪಡೆದಿದ್ದಾರೆ.
ಹೌದು.. ಬಾಗಲಕೋಟೆ ನವನಗರದ ತೋಟಗಾರಿಕಾ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಮಾತಿನ ಮಧ್ಯೆ ಬಾಲಕಿ ಬಳಿ ಇದ್ದ ಫೋಟೋವನ್ನು ನೀಡುವಂತೆ ಮನವಿ ಮಾಡಿದರು. ಅಲ್ಲದೇ ಅದರಲ್ಲಿ ನಿನ್ನ ಹೆಸರು, ವಿಳಾಸವನ್ನು ಬರೆದುಕೊಡು ಪತ್ರ ಬರೆಯುವೆ ಎಂದು ಮೋದಿ ಹೇಳಿತ್ತಿದ್ದಂತೆ ನೆರದ ಜನ ಮೋದಿ ಮೋದಿ ಎಂದು ಜೈಕಾರ ಹಾಕಿದರು.
ಬಾಲಕಿಯು ಮೋದಿಯವರು ಅವರ ತಾಯಿಯ ಆಶೀರ್ವಾದ ಪಡೆಯುತ್ತಿರುವ ಚಿತ್ರ ಬಿಡಿಸಿದ್ದು, ಅದನ್ನು ಖುಷಿಯಿಂದ ಪ್ರಧಾನಿಗೆ ನೀಡಿದ್ದಾಳೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಈ ದೃಶ್ಯದ ಲಿಂಕ್‌ ಇಲ್ಲಿದೆ ನೋಡಿ.